ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

number-1-advt-copy-new.webp

ಶಿವಮೊಗ್ಗ: ಸಹ್ಯಾದ್ರಿ ಕಲಾತಂಡದಿಂದ ಮಾರ್ಚ್ 7ರಿಂದ 10ರ ವರೆಗೆ ನಾಲ್ಕು ದಿನಗಳ ಕಾಲ ನಗರದ ಕುವೆಂಪು ರಂಗಮಂದಿರದಲ್ಲಿ ಸಹ್ಯಾದ್ರಿ ನಾಟಕೋತ್ಸವ (Natakotsava) ಹಮ್ಮಿಕೊಳ್ಳಲಾಗಿದೆ ಎಂದು ಕಲಾತಂಡದ ಪ್ರಮುಖ ಡಾ.ಜಿ.ಆರ್.ಲವ ತಿಳಿಸಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಲವ, ನಾಟಕಗಳು ನಾಡಿನ ಬಾಹ್ಯ ಜೀವನದ ಬಗ್ಗೆ ತಿಳಿಸುತ್ತವೆ. ಈ ದೃಷ್ಟಿಯಿಂದ ಸಾಂಸ್ಕೃತಿಕ ಮೌಲ್ಯ ಗಟ್ಟಿಗೊಳಿಸಲು ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಮಾರ್ಚ್ 7ರಿಂದ 10ರ ವರೆಗೆ ಪ್ರತಿದಿನ 6.30ಕ್ಕೆ ಆರಂಭವಾಗಲಿದೆ. ಅದಕ್ಕೂ ಮೊದಲು ಸೈಬರ್ ಕ್ರೈಮ್‌ ಸೇರಿ ವಿವಿಧ ವಿಷಯಗಳ ಕುರಿತು ಬೀದಿ ನಾಟಕಗಳನ್ನು ಪ್ರದರ್ಶಿಸಲಾಗುವುದು. ಸಂಜೆ 7.15ರಿಂದ ಮುಖ್ಯ ನಾಟಕಗಳು ಪ್ರಾರಂಭವಾಗಲಿವೆ ಎಂದರು.

Sahyadri-Natakotsava-in-Shimoga-4-day-theater-Festival-Dr-Lava-GR.

ಯಾವ್ಯಾವ ದಿನ ಯಾವ ನಾಟಕ?

ಮಾ.7ರಂದು ಸಹ್ಯಾದ್ರಿ ಕಲಾತಂಡ ಚಂದ್ರಶೇಖರ ಕಂಬಾರ ರಚನೆಯ, ಜಿ.ಆರ್.ಲವ ನಿರ್ದೇಶನದ ಜೋಕುಮಾರಸ್ವಾಮಿ ನಾಟಕ

Sahyadri-Natakotsava-in-Shimoga-4-day-theater-Festival-Dr-Lava-GR.

ಮಾ.8ರಂದು ಉಡುಪಿಯ ಸುಮನಸಾ ಕೊಡವೂರು ಅವರಿಂದ ಸಮೀರ್ ಸೂರ್ಯಕಾಂತ್ ಪೆಣ್ಕರ್ ರಚನೆಯ, ವಿದ್ದು ಉಚ್ಚಿಲ್ ನಿರ್ದೇಶನದ ಈದಿ ನಾಟಕ

ಮಾ.9ರಂದು ಕಲುಬುರಗಿ ರಂಗಾಯಣ ತಂಡದಿಂದ ಜಯಂತ್ ದಳ್ವಿ ರಚನೆಯ ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಕಾಲಚಕ್ರ ನಾಟಕ

ಮಾ.10ರಂದು ಕರಾವಳಿಯ ನಿರ್ದಿಗಂತ ತಂಡದಿಂದ ಕೆ.ವಿ.ಸುಬ್ಬಣ್ಣ ಕನ್ನಡಕ್ಕೆ ಅನುವಾದಿಸಿರುವ, ಗಣೇಶ್ ಮಂದಾರ್ತಿ ರಂಗರೂಪ, ಸಂಗೀತ ನೀಡಿ ನಿದೇರ್ಶಿಸಿರುವ ಲೋಹಿಯಾ ಲೇಖನಾಧಾರಿತ ರಾಮ ಕೃಷ್ಣ ಶಿವ ನಾಟಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.

nataka

ಟಿಕೆಟ್‌ ಕಾಂಬೊ ಆಫರ್‌

ರಂಗ ಹಬ್ಬದ ಪ್ರತಿ ನಾಟಕಕ್ಕೆ ₹100 ಪ್ರವೇಶ ದರ ನಿಗದಿಪಡಿಸಲಾಗಿದೆ. ನಾಲ್ಕು ನಾಟಕಗಳಿಗೆ ₹300 ಪ್ರವೇಶ ದರ ನಿಗದಿಪಡಿಸಿದೆ. 100ಕ್ಕೂ ಹೆಚ್ಚು ಕಲಾವಿದರು ಸಹ್ಯಾದ್ರಿ ನಾಟಕೋತ್ಸವದಲ್ಲಿ ಬಣ್ಣ ಹಚ್ಚಲಿದ್ದಾರೆ. ಪ್ರದರ್ಶನವಾಗುವ ಎಲ್ಲ ನಾಟಕಗಳು ಸಾಮಾಜಿಕ ಕಳಕಳಿ, ಸಹಬಾಳ್ವೆ, ಸಾಮರಸ್ಯ ಹುಡುಕುವ ಸಂಗತಿಗಳ ಬಗ್ಗೆ ತಿಳಿಸುತ್ತವೆ ಎಂದರು.

ಇದನ್ನೂ ಓದಿ – ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಮಂಜಪ್ಪ, ರಜನೀಶ್, ರಕ್ಷಿತಾ, ಪ್ರಜ್ವಲ್, ನವೀನ್ ಮತ್ತಿತರರಿದ್ದರು.

Sunrise Facility Services, Sri sai Trust Shimoga

Leave a Comment