ಶರಾವತಿ ನಗರದಲ್ಲಿ ಕಾರು ಗಾಜು ಪೀಸ್‌ ಪೀಸ್‌ ಕೇಸ್‌, ಮೂವರು ಅರೆಸ್ಟ್‌, ಘಟನೆಗೆ ಕಾರಣ ಮನೆ

number-1-advt-copy-new.webp

ಶಿವಮೊಗ್ಗ: ಶರಾವತಿ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಒಡೆದು (vandalizing) ಸುಮಾರು ₹2.5 ಲಕ್ಷ ಹಾನಿ ಮಾಡಿದ್ದ ಮೂವರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿನೋಬನಗರದ ಶರತ್.ಕೆ, ಪ್ರಶಾಂತ್.ಎ ಮತ್ತು ಶರಾವತಿ ನಗರದ ಸತೀಶ.ಡಿ ಎಂದು ಗುರುತಿಸಲಾಗಿದೆ.

ಶರಾವತಿ ನಗರದ ನಿವಾಸಿ ಸುರೇಶ ಆರ್. ಎಂಬುವವರು ಮಾರ್ಚ್ 3ರಂದು ರಾತ್ರಿ ತಮ್ಮ ಕಾರನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಅಂದು ರಾತ್ರಿ ಸುಮಾರು 11:40ಕ್ಕೆ ಬಂದ ಕಿಡಿಗೇಡಿಗಳು ಕಾರಿನ ಮುಂಭಾಗ, ಹಿಂಭಾಗ ಮತ್ತು ಬಲ ಬದಿಯ ಗಾಜುಗಳನ್ನು ಒಡೆದು ಹಾಕಿದ್ದರು. ಈ ಬಗ್ಗೆ ಸುರೇಶ್ ಅವರು ನೀಡಿದ ದೂರಿನನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಏರ್‌ಟೆಲ್‌ ಮೊಬೈಲ್‌ ಟವರ್‌ನ ಉಪಕರಣ ಕಳವು, ಆಗಿದ್ದೇನು?

ಆರೋಪಿಗಳ ಪತ್ತೆಗೆ ಸಿಸಿಟಿವಿ ನೆರವು

ಆರೋಪಿಗಳ ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳ ಚಹರೆಯನ್ನು ಗುರುತಿಸಿ ಅವರನ್ನು ಪತ್ತೆ ಹಚ್ಚಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Car-Incident-at-Sharavathi-Nagara-in-Shimoga-city

ಜಗಳಕ್ಕೆ ಮನೆ ಖರೀದಿ ಕಾರಣ

ಶರಾವತಿ ನಗರದ ಸುರೇಶ್ ಅವರು ಖರೀದಿಸಲು ಮುಂದಾಗಿದ್ದ ಮನೆಯನ್ನು 3ನೇ ಆರೋಪಿ ಸತೀಶ್ ಖರೀದಿ ಮಾಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದವು. ಇದೇ ದ್ವೇಷದ ಹಿನ್ನೆಲೆ ಸತೀಶ್ ತನ್ನ ಸ್ನೇಹಿತರಾದ ಶರತ್ ಮತ್ತು ಪ್ರಶಾಂತ್ ಅವರೊಂದಿಗೆ ಸೇರಿ, ಕುಡಿದ ಮತ್ತಿನಲ್ಲಿ ಸುರೇಶ ಅವರ ಕಾರಿನ ಗ್ಲಾಸ್ ಒಡೆದು ನಷ್ಟ ಉಂಟುಮಾಡಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿಬ್ಬಂದಿ ಸಂದೀಪ್, ಗಣೇಶ್, ಗುರುನಾಯ್ಕ ಹಾಗೂ ಮನೋಹರ್ ಅವರು ತಂಡ ಆರೋಪಿಗಳನ್ನು ಬಂಧಿಸಿದೆ.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 5, 2026 at 5:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 5, 2026

Leave a Comment