
ಸಾಗರ: ನಗರದಲ್ಲಿ ರೈಲಿಗೆ (train) ತಲೆಕೊಟ್ಟು ನಾಗರಾಜ್ ಎಂಬುವರ ಪುತ್ರ ನಿತಿನ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಕಡೆಯಿಂದ ಆಗಮಿಸುತ್ತಿದ್ದ ರೈಲಿಗೆ ತಲೆಕೊಟ್ಟಿದ್ದಾನೆ.
ಲೋಕೋ ಪೈಲಟ್ ತುರ್ತಾಗಿ ಬ್ರೇಕ್ ಹಾಕಿದರೂ ನಿತಿನ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರುಂಡ ದೇಹದಿಂದ ಬೇರ್ಪಟ್ಟಿದೆ. ಘಟನೆಯಿಂದ ರೈಲನ್ನು ಕೆಲಕಾಲ ಸ್ಥಳದಲ್ಲೇ ನಿಲ್ಲಿಸಲಾಗಿತ್ತು. ಸಾಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಮುಂಭಾಗ








