ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

number-1-advt-copy-new.webp

ಶಿವಮೊಗ್ಗ: ಹೆಗಲತ್ತಿಯ ಶ್ರೀ ಕ್ಷೇತ್ರದಲ್ಲಿ ನಾಗಯಕ್ಷೆ ದೇವಿ, ನವಗ್ರಹ ಹಾಗೂ ನಾಗದೇವರ 12ನೇ ವಾರ್ಷಿಕೋತ್ಸವದ (Anniversary) ಪೂಜಾ ಕಾರ್ಯಕ್ರಮವು ಆರಂಭಗೊಂಡಿದೆ. ಮಾರ್ಚ್ 8ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಮುಖರಾದ ಗಜೇಂದ್ರನಾಥ್ ತಿಳಿಸಿದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಏರ್‌ಟೆಲ್‌ ಮೊಬೈಲ್‌ ಟವರ್‌ನ ಉಪಕರಣ ಕಳವು, ಆಗಿದ್ದೇನು?

Nagayakshe-temple-at-hegalatti-in-Thirthahalli-taluk

ಶುಕ್ರವಾರ ಮಹಾಗಣಪತಿ ಪೂಜೆ, ನವಚಂಡಿಕಾ ಹವನ ಹಾಗೂ ಆಶ್ಲೇಷ ಬಲಿ ನಡೆಯಿತು. ಮಾ. 7ರಂದು ಪಲ್ಲಕ್ಕಿಯಲ್ಲಿ ದೇವರ ಆಗಮನ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

Nagayakshe-temple-at-hegalatti-in-Thirthahalli-taluk

ವಿವಿಧ ದೇವಸ್ಥಾನಗಳ 9 ಪಲ್ಲಕ್ಕಿಗಳು ಆಗಮಿಸಲಿದ್ದು, ಬಂಗಾರಮಕ್ಕಿ ದೇವಸ್ಥಾನದ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿರುವರು ಎಂದರು.

ಅದೇ ದಿನ ರಾತ್ರಿ ನಾಗಮಂಡಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾ. 8ರಂದು ಪಲ್ಲಕ್ಕಿ ದೇವರ ಆರಾಧನೆಯೊಂದಿಗೆ ಜಾತ್ರೆ ಸಮಾಪನಗೊಳ್ಳಲಿದೆ ಎಂದು ತಿಳಿಸಿದರು.

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment