ಕಾರ್ಗಲ್‌ನಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್‌ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಕಾರ್ಗಲ್: ಸರ್ಕಾರಿ ಪ್ರಾಥಮಿಕ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್ ಹೊಟ್ಟೆನೋವು ಮತ್ತು ವಾಂತಿಭೇದಿಯಿಂದ ಅಸ್ವಸ್ಥರಾಗಿದ್ದು ಕೂಡಲೇ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ಥಳೀಯ ಕೆಪಿಸಿ ಆಸ್ಪತ್ರೆಗೆ (hospitalized) ದಾಖಲಿಸಿದರು.

ಕೆಪಿಸಿ ಇಲಾಖೆಯ ವೈದ್ಯಾಧಿಕಾರಿ ತೇಜಸ್ವಿನಿ ಹಾಗೂ ಕಾರ್ಗಲ್ ಸರ್ಕಾರಿ ಆಸ್ಪತ್ರೆಯ ಡಾ. ಜೀಶಾಂತ ಪಾಟೀಲ್‌ರ ತಂಡ ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆ ನೀಡಿದರು. 12 ದಿನದಿಂದ ಜೋಗ, ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಜನ ಹೊಟ್ಟೆನೋವು, ವಾಂತಿ-ಭೇದಿಯಿಂದ ನಿತ್ರಾಣಗೊಂಡಿದ್ದಾರೆ.

Students-admitted-to-Kargal-Hospital-in-Sagara

Students-admitted-to-Kargal-Hospital-in-Sagara

ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆದೇಶದ ಮೇರೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ. ಸುರೇಶ್ ಮತ್ತು ಆರೋಗ್ಯ ಇಲಾಖೆಯ ಶಂಕರ ನೇತೃತ್ವದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ – ಭದ್ರಾವತಿಯ ಒಂದೇ ಕುಟುಂಬದ ಐದು ಜನರಿಗೆ 2 ವರ್ಷ ಜೈಲು ಶಿಕ್ಷೆ, ₹1,90,000 ದಂಡ, ಏನಿದು ಪ್ರಕರಣ?

Sunrise Facility Services, Sri sai Trust Shimoga

Leave a Comment