ಹೊಸನಗರ: ತಾಲೂಕಿನ ಹುಂಚ ಸಮೀಪದ ಮಾರ್ನಮಿಬೈಲ್ನಿಂದ ನಾಪತ್ತೆಯಾಗಿದ್ದ ಯುವಕ ನೇಣುಬಿಗಿದ (body) ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಾರ್ನಮಿಬೈಲು ಗ್ರಾಮದ ಎನ್. ಧನುಷ್(25) ಮೃತ ಯುವಕ.

ಜ.19ರಂದು ಮನೆಯಿಂದ ಹೋಗಿದ್ದ ಧನುಷ್ ಮತ್ತೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬುಧವಾರ 5ಎಂಎಸ್ ಪ್ರದೇಶದ ಸಮೀಪದ ತಿಗುಣಿಕೊಪ್ಪ ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಇದನ್ನೂ ಓದಿ – ಭದ್ರಾವತಿಯ ಒಂದೇ ಕುಟುಂಬದ ಐದು ಜನರಿಗೆ 2 ವರ್ಷ ಜೈಲು ಶಿಕ್ಷೆ, ₹1,90,000 ದಂಡ, ಏನಿದು ಪ್ರಕರಣ?
ಮೃತದೇಹವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಕುಂಸಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದರು.








