ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿಕಾರಿಪುರ: ತಾಲೂಕಿನ ಬಿಳಿಕಿ ಗ್ರಾಮದಲ್ಲಿ ಅಳಿಯನೆ ತನ್ನ ಮಾವನ (father-in-law) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಚನ್ನಾನಾಯ್ಕ (72) ಎಂಬುವವರ ಕುತ್ತಿಗೆ ಸೀಳಿ ಕೊಲೆ ಮಾಡಲು ಯತ್ನಿಸಲಾಗಿದೆ.
ಇದನ್ನೂ ಓದಿ – ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು
ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಅಳಿಯ ಮಾಲತೇಶ್ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಚನ್ನಾನಾಯ್ಕ ಅವರನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಾಲತೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

LATEST NEWS
- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

- ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

About The Editor
ನಿತಿನ್ ಆರ್.ಕೈದೊಟ್ಲು














