ಶಿವಮೊಗ್ಗ: ಹುಲಿಗಣತಿಗಾಗಿ ಅಳವಡಿಸಲಾಗಿದ್ದ ಎರಡು ಅತ್ಯಾಧುನಿಕ ಕ್ಯಾಮರಾಗಳು ಕಳ್ಳತನವಾಗಿವೆ (cameras stolen). ಅಖಿಲ ಭಾರತ ರಾಷ್ಟ್ರೀಯ ಹುಲಿಗಣತಿ 2026ರ ಕಾರ್ಯಾಚರಣೆಯ ಅಂಗವಾಗಿ ಈ ಕ್ಯಾಮರಾಗಳನ್ನು ಸಕ್ರೆಬೈಲ್ ವನ್ಯಜೀವಿ ವಲಯದ ವಿವಿಧೆಡೆ ಅಳವಡಿಸಲಾಗಿತ್ತು. ಕಳುವಾದ ಈ ಎರಡು ಕಡ್ಡಿಬ್ಯಾಕ್ ಕಂಪನಿಯ ಕ್ಯಾಮರಾಗಳ ಮೌಲ್ಯ ₹50,000 ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಮಾರ್ಚ್ 21ರ ಮಧ್ಯಾಹ್ನ ಉಪ ವಲಯ ಅರಣ್ಯಾಧಿಕಾರಿ ಸತೀಶ್ ಅವರು ಭೇಟಿ ನೀಡಿದ್ದಾಗ ಶಾಂತಣ್ಣ ಕೆರೆ ಸಮೀಪ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ ಜಾಗದಲ್ಲಿಯೇ ಈ ಕ್ಯಾಮರಾಗಳು ಇದ್ದವು. ಮಾರ್ಚ್ 22ರಂದು ಬೆಳಗ್ಗೆ ಸಿಬ್ಬಂದಿ ಪರಿಶೀಲಿಸಿದಾಗ ಕ್ಯಾಮರಾಗಳು ನಾಪತ್ತೆಯಾಗಿದ್ದವು. ಅಪರಿಚಿತರು ಅರಣ್ಯದೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಕ್ರೆಬೈಲ್ ವಲಯ ಅರಣ್ಯಾಧಿಕಾರಿ ವಿನಯ್.ಜಿ.ಆರ್ ಈ ಕುರಿತು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


