ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

Sunrise Facility Services, Sri sai Trust Shimoga

ಸೊರಬ: ಪುರಾಣ ಪ್ರಸಿದ್ಧ ಮಂಚಿಯ ಆಂಜನೇಯ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬಿಲ್ವಪತ್ರೆ ಮರವನ್ನು (Bilva Tree Ritual) ಬುಡ ಸಮೇತ ಹೊತ್ತು ತರುವ ಪವಾಡ ಸದೃಶ ಪ್ರಕ್ರಿಯೆ ಶನಿವಾರ ಸಂಜೆ ದೊಡ್ಡ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯ ನಡುವೆ ಜರುಗಿತು.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿ ವರ್ಷದಂತೆ ಈ ವರ್ಷ ಆರು ಮರಗಳಲ್ಲಿ 2 ಚಿಗುರು, 4 ಚಿಗುರಿಲ್ಲದ ಮರಗಳನ್ನು ಹೊತ್ತು ತಂದಿದ್ದರಿಂದ ಹದ ಮಳೆ ಆಗುತ್ತದೆ ಎಂಬ ವಿಶ್ಲೇಷಣೆ ಹಿರಿಯರಿಂದ ಕೇಳಿ ಬಂದಿತು.

Soraba-Manchi-Anjaneya-Temple-Jathre

Soraba-Manchi-Anjaneya-Temple-Jathre

ಗ್ರಾಮದ ದಾಸ ಮನೆತನದ ಗುತ್ಯಪ್ಪ ಪರಶುರಾಮಪ್ಪ ಸುಭಾಷ್‌ಚಂದ್ರ ಮೂರ್ತಿ, ಷಣ್ಮುಖ ಹಾಗೂ ವಾಸುದೇವ್ ಅವರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಭೂತಾರಾಧನೆ, ಹಣ್ಣುಮಣೇವು ಹರಕೆ ಸಲ್ಲಿಕೆ ಮೊದಲಾದ ವಿಶೇಷ ಪೂಜೆ, ಹರಕೆ ವಿಧಿಗಳನ್ನು ಸಾವಿರಾರು ಭಕ್ತರು ನೆರವೇರಿಸಿ, ಹನುಮಂತ ದೇವರ ದರ್ಶನ ಪಡೆದರು. ಬೇರುಸಹಿತ ಮರವನ್ನು ಕಿತ್ತು ತರಲು ಗ್ರಾಮದ ದಾಸ ಮನೆತನದ ಆರು ಜನ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೈಯಲ್ಲಿ ಕತ್ತಿ ಹಿಡಿದು ಪ್ರತ್ಯೇಕವಾಗಿ ವಿವಿಧ ದಿಕ್ಕುಗಳಿಗೆ ತೆರಳಿದರು.

ಇದನ್ನೂ ಓದಿ – ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

ಸಂಜೆಯ ವೇಳೆಗೆ ಬೇರು ಸಹಿತ ಬಿಲ್ವಪತ್ರೆ ಮರ ಕಿತ್ತು ಹೊತ್ತುಕೊಂಡು ಒಂದೇ ದಿಕ್ಕಿನ ಮೂಲಕ ಸಾಲಗಿ ಬಂದರು. ಅವರು ಬರುವುದನ್ನು ನೋಡಲು ಗ್ರಾಮದ ಕೆರೆ ಅಂಗಳದಲ್ಲಿ ಜಮಾಯಿಸಿದ್ದ ಲಕ್ಷಾಂತರ ಭಕ್ತರು, ಹರ್ಷೋದ್ಗಾರದಿಂದ ಸ್ವಾಗತಿಸಿದರು. ಮರಗಳಿಗೆ ನಮಸ್ಕರಿಸುತ್ತಾ ಅರಳಿಕಟ್ಟೆವರೆಗೆ ಸಾಗಿ ಪೂಜೆ ಸಲ್ಲಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.

Leave a Comment