ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಗರದ ಎನ್.ಇ.ಎಸ್. ಮೈದಾನದಲ್ಲಿ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀಕಾಂತಣ್ಣ ಕಪ್-3 ಕ್ರಿಕೆಟ್ ಪಂದ್ಯಾವಳಿಯು (cricket tournament) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವೀರಶೈವ ತಂಡವು ಭರ್ಜರಿ ಜಯ ಸಾಧಿಸಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಸಮುದಾಯಗಳ ಸೌಹಾರ್ದತೆಗೆ ವೇದಿಕೆ
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಎಲ್ಲಾ ಸಮಾಜಗಳು ಕ್ರೀಡೆಯ ಮೂಲಕ ಒಂದಾಗುತ್ತಿರುವುದು ಹಬ್ಬದ ವಾತಾವರಣ ನಿರ್ಮಿಸಿದೆ. ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ನಾವೆಲ್ಲರೂ ಒಟ್ಟಾಗಿ ಯೋಚಿಸಬೇಕಾದ ಅಗತ್ಯವಿದೆ. ಕ್ರಿಕೆಟ್ ಒಂದು ಜೆಂಟಲ್‌ಮನ್ ಗೇಮ್ ಆಗಿದ್ದು, ಈ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಸೌಹಾರ್ದತೆಯ ಸಂದೇಶ ರವಾನೆಯಾಗಿದೆ, ಎಂದು ಸಂತಸ ವ್ಯಕ್ತಪಡಿಸಿದರು.

ಯಾವ್ಯಾವ ತಂಡ ಗೆದ್ದಿದೆ?
ಒಟ್ಟು 13 ಸಮಾಜಗಳ 19 ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನ ವೀರಶೈವ ತಂಡ, ದ್ವಿತೀಯ ಬಹುಮಾನ ವಿಪ್ರ ಸಿಸಿ ತಂಡ, ತೃತೀಯ ಬಹುಮಾನ ಅಂಬಿಗರ ಚೌಡಯ್ಯ ತಂಡದ ಮುಡಿಗೇರಿದೆ. ಸಮಾರೋಪ ಸಮಾರಂಭದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ಮುಖಂಡರಾದ ಪಾಲಾಕ್ಷಿ, ನರಸಿಂಹ ಗಂಧದ ಮನೆ, ಯುವರಾಜ್, ಎ.ಹೆಚ್. ಸುನಿಲ್, ಗಿರೀಶ್ ಹಾಗೂ ಭಾವಸಾರ ಕ್ಷತ್ರಿಯ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಒಂದೂವರೆ ಕೋಟಿ ಮೌಲ್ಯದ ಅಡಿಕೆ ನಾಪತ್ತೆ, ಆಗಿದ್ದೇನು?

LATEST NEWS
- ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

- ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

- ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

- 6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

- ₹50 ಪೆಟ್ರೋಲ್ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್

About The Editor
ನಿತಿನ್ ಆರ್.ಕೈದೊಟ್ಲು













