ಶಿವಮೊಗ್ಗ: ಚೆನ್ನಪ್ಪ ಲೇಔಟ್‌ನಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿದ ಕಳ್ಳರು (burglars) ಬೆಳ್ಳಿ ವಿಗ್ರಹಗಳು ಹಾಗೂ ಸಿಸಿಟಿವಿ ಉಪಕರಣಗಳನ್ನು ಕಳವು ಮಾಡಿದ್ದಾರೆ. ಇಂಜಿನಿಯರ್ ಹೆಚ್.ಆರ್. ರವಿಕುಮಾರ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ನಗರಸಭೆ ಸಿಬ್ಬಂದಿ ಎಂದು ನಂಬಿಸಿ ₹11.62 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

ರವಿಕುಮಾರ್ ಅವರು ಪತ್ನಿಯೊಂದಿಗೆ ಬೆಂಗಳೂರಿಗೆ ಹೋಗಿದ್ದರು. ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಸಿಟ್ ಔಟ್ ಬಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿದ್ದಾರೆ. ಬೀರುವಿನ ಬೀಗ ಮುರಿದು ಒಳಗಿದ್ದ ವಸ್ತುಗಳನ್ನು ದೋಚಿದ್ದಾರೆ.

ಒಟ್ಟು 250 ಗ್ರಾಂ ತೂಕದ ಬೆಳ್ಳಿಯ ಗಣಪತಿ, ಗೌರಿ, ಲಕ್ಷ್ಮಿ ವಿಗ್ರಹಗಳು ಹಾಗೂ ಪಂಚಪಾತ್ರೆ ಕಳುವಾಗಿವೆ. ಕಳ್ಳರು ಕುರುಹು ಸಿಗದಂತೆ ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಹಾಗೂ ವೈಫೈ ಕ್ಯಾಮೆರಾವನ್ನೂ ಬಿಚ್ಚಿಕೊಂಡು ಹೋಗಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ₹65,000 ಎಂದು ಅಂದಾಜಿಸಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಚನ್ನಪ್ಪ ಲೇಔಟ್‌ನಲ್ಲಿ ಬೆಳಗ್ಗೆ ಮನೆ ಹೊರ ಬಂದ ಯುವಕನಿಗೆ ಕಾದಿತ್ತು ಆಘಾತ
