ಶಿವಮೊಗ್ಗದ JNN ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೂಟ್‌ ಕ್ಯಾಂಪ್‌, ಏನಿದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಪ್ರಸ್ತುತ ಆವಿಷ್ಕಾರ ಕೇವಲ ಆಯ್ಕೆಯಲ್ಲ, ಅದು ಒಂದು ಅವಶ್ಯಕತೆ ಎಂದು ಎಐಸಿಟಿಇ ಇನೋವೇಶನ್ ಕೇಂದ್ರದ ಪ್ರಾದೇಶಿಕ ಸಂಯೋಜಕ ಅಶೀಷ್ ತ್ರಿಪಾಠಿ ಹೇಳಿದರು. (Boot Camp)

Shivamogga-Live-Number-1-Website

ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಐಸಿಟಿಇ ನೇತೃತ್ವದಲ್ಲಿ ಭಾರತ ಶಿಕ್ಷಣ ಸಚಿವಾಲಯ, ವಾದ್ವಾನಿ ಫೌಂಡೇಷನ್ ಹಾಗೂ ಎಸ್‌ಬಿಐ ಫೌಂಡೇಷನ್ ಸಂಯುಕ್ತಾ ಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಐದು ದಿನಗಳ ನಾವೀನ್ಯತೆ ಮತ್ತು ಉದ್ಯಮಶೀಲತೆ ಬೂಟ್ ಕ್ಯಾಂಪ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ : ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಆವಿಷ್ಕಾರ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವುದರ ಜತೆಗೆ ನೈಜ ಜಗತ್ತಿನ ಸಮಸ್ಯೆ ಗಳಿಗೆ ಪರಿಹಾರ ನೀಡುತ್ತದೆ. ಆದ್ದರಿಂದ ಯುವ ಸಮೂಹದಲ್ಲಿ ಕಾಲೇಜು ಹಂತ ಗಳಲ್ಲಿಯೆ ಉದ್ಯಮಶೀಲ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

070426-BOOT-Camp-at-JNNCE-College-in-Shimoga.avif

ಈ ಬೂಟ್ ಕ್ಯಾಂಪ್ ಕಾರ್ಯಕ್ರಮವು ನಾವೀನ್ಯಯುತ ಆಲೋಚನೆ ಮತ್ತು ಅದರ ಅನುಷ್ಠಾನದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದೆ. ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವ ಆತ್ಮಬಲ ನಿರ್ಮಿಸಲು ಇಂತಹ ವೇದಿಕೆಗಳು ಪ್ರೇರಣಾದಾಯಕವಾಗಿ ಕಾರ್ಯನಿರ್ವ ಹಿಸಲಿದೆ ಎಂದು ಹೇಳಿದರು. ಅರೇಕಾ ಟಿ ಕಂಪನಿಯ ಸಂಸ್ಥಾಪಕ ನಿವೇದನ್ ನೆಂಪೆ ಮಾತನಾಡಿ, ಹೊಸತನದೆಡೆಗೆ ಚಿಂತಿಸುವಾಗ ಮೂದಲಿಕೆ ಮಾತುಗಳು ಸಹಜ. ಸಮಸ್ಯೆಗಳಿದ್ದ ಕಡೆ ಅವಕಾಶಗಳು ಹೆಚ್ಚಾಗಿರುತ್ತವೆ. ಅದರ ಜತೆಯಲ್ಲಿ ಸವಾಲುಗಳು ನಮ್ಮನ್ನು ಕಾಡುತ್ತವೆ. ಅಂತಹ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಆತ್ಮಸ್ಥೆರ್ಯ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ನಾವೀನ್ಯಯುತ ಯೋಚನೆಗಳನ್ನು ಬಲವಾಗಿ ನಂಬಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಗಾಂಧೀಜಿಯವರ ಸ್ವದೇಶಿ ಚಳವಳಿಯ ಕಲ್ಪನೆಯು ಕೇವಲ ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಾಗಿರಲಿಲ್ಲ. ಜತೆಯಲ್ಲಿ ನಮ್ಮ ಜನರಿಗೆ, ನಮ್ಮ ಪರಿಸರಕ್ಕೆ ತಕ್ಕಂತಹ ಉತ್ಪನ್ನಗಳನ್ನು ನಿರ್ಮಿಸುವುದು ಕೂಡ ಆಗಿತ್ತು. ಇಂದು ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂದೆ ಇದ್ದೇವೆ. ಆದರೆ ತಂತ್ರಜ್ಞಾನವನ್ನು ಸ್ವತಃ ಅಭಿವೃದ್ಧಿಪಡಿಸುವಲ್ಲಿ ಹಿಂದುಳಿದಿದ್ದೇವೆ. ಇಂದಿಗೂ ಹಲವಾರು ಕ್ಷೇತ್ರಗಳಲ್ಲಿ ಇತರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ.- ಎಸ್.ಎನ್.ನಾಗರಾಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ

ಇದನ್ನೂ ಓದಿ : ಹೆದ್ದಾರಿಯಲ್ಲಿ ಗುಂಡಿ ಮುಚ್ಚಿದ ಸಂಸದ, ಗಮನ ಸೆಳೆದ JNNCE ಆವಿಷ್ಕಾರ

ಗಾಂಧೀಜಿಯವರ ಸ್ವದೇಶಿ ಚಳವಳಿಯ ಕಲ್ಪನೆಯು ಕೇವಲ ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಾಗಿರಲಿಲ್ಲ. ಜತೆಯಲ್ಲಿ ನಮ್ಮ ಜನರಿಗೆ, ನಮ್ಮ ಪರಿಸರಕ್ಕೆ ತಕ್ಕಂತಹ ಉತ್ಪನ್ನಗಳನ್ನು ನಿರ್ಮಿಸುವುದು ಕೂಡ ಆಗಿತ್ತು. ಇಂದು ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂದೆ ಇದ್ದೇವೆ. ಆದರೆ ತಂತ್ರಜ್ಞಾನವನ್ನು ಸ್ವತಃ ಅಭಿವೃದ್ಧಿಪಡಿಸುವಲ್ಲಿ ಹಿಂದುಳಿದಿದ್ದೇವೆ. ಇಂದಿಗೂ ಹಲವಾರು ಕ್ಷೇತ್ರಗಳಲ್ಲಿ ಇತರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ.- ಎಸ್.ಎನ್.ನಾಗರಾಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ
070426-BOOT-Camp-at-JNNCE-College-in-Shimoga.avif

ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಐಸಿಟಿಇ ಜೆಎನ್‌ಎನ್‌ಸಿಇ ಐಡಿಯಾ ಲ್ಯಾಬ್ ಸಂಯೋಜಕ ಮೋಯಿನುದ್ದಿನ್ ಖಾನ್, ಬೂಟ್ ಕ್ಯಾಂಪ್ ಸಂಯೋಜಕ ಕೆ.ಎಲ್.ಅರುಣ್ ಕುಮಾರ್, ವಾದ್ವಾನಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಡಾ.ಸುಪ್ರಭ ಇತರರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 7, 2026

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಯುವಕ ಸಾವು, ತೋಟದ ಬಳಿ ಪತ್ತೆಯಾಯ್ತು ಮೃತದೇಹ

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಯುವಕ ಸಾವು, ತೋಟದ ಬಳಿ ಪತ್ತೆಯಾಯ್ತು ಮೃತದೇಹ

ಶಿವಮೊಗ್ಗದ ಈ ಬಡಾವಣೆ ಇನ್ಮುಂದೆ ಎಸ್.‌ ಬಂಗಾರಪ್ಪ ಬಡಾವಣೆ

ಶಿವಮೊಗ್ಗದ ಈ ಬಡಾವಣೆ ಇನ್ಮುಂದೆ ಎಸ್.‌ ಬಂಗಾರಪ್ಪ ಬಡಾವಣೆ

ಭೂಮಾಪಕನಿಗೆ ಕಾರು ಡಿಕ್ಕಿ, ಆಸ್ಪತ್ರೆಗೆ ದಾಖಲು, ಶಸ್ತ್ರಚಿಕಿತ್ಸೆ, ಎಲ್ಲಿ? ಹೇಗಾಯ್ತು ಘಟನೆ?

ಭೂಮಾಪಕನಿಗೆ ಕಾರು ಡಿಕ್ಕಿ, ಆಸ್ಪತ್ರೆಗೆ ದಾಖಲು, ಶಸ್ತ್ರಚಿಕಿತ್ಸೆ, ಎಲ್ಲಿ? ಹೇಗಾಯ್ತು ಘಟನೆ?

ಶಿವಮೊಗ್ಗದ ಇಬ್ಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪುರಸ್ಕಾರ

ಶಿವಮೊಗ್ಗದ ಇಬ್ಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪುರಸ್ಕಾರ

ಇಂಟರ್‌ಸಿಟಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಮಹಿಳೆ, ಮನೆ ತಲುಪಿದ ಮೇಲೆ ಕಾದಿತ್ತು ಆಘಾತ

ಇಂಟರ್‌ಸಿಟಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಮಹಿಳೆ, ಮನೆ ತಲುಪಿದ ಮೇಲೆ ಕಾದಿತ್ತು ಆಘಾತ

ರಾಜ್ಯಾದ್ಯಂತ ಜಿಮ್‌ಗಳಲ್ಲಿ ತನಿಖೆಗೆ ಆಗ್ರಹ, ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ಪ್ರತಿಭಟನೆ

ರಾಜ್ಯಾದ್ಯಂತ ಜಿಮ್‌ಗಳಲ್ಲಿ ತನಿಖೆಗೆ ಆಗ್ರಹ, ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ಪ್ರತಿಭಟನೆ

ಬೈಕ್‌ಗೆ ದಿಢೀರ್‌ ಅಡ್ಡಬಂದ ಕಾಡುಪ್ರಾಣಿ, ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸವಾರ ಸಾವು

ಬೈಕ್‌ಗೆ ದಿಢೀರ್‌ ಅಡ್ಡಬಂದ ಕಾಡುಪ್ರಾಣಿ, ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸವಾರ ಸಾವು

ಕೆಎಫ್‌ಡಿ ಸೋಂಕು, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಬ್ಬರು ಸಾವು, ಸದ್ಯ ಸೋಂಕಿತರ ಸಂಖ್ಯೆ ಎಷ್ಟಿದೆ?

ಕೆಎಫ್‌ಡಿ ಸೋಂಕು, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಬ್ಬರು ಸಾವು, ಸದ್ಯ ಸೋಂಕಿತರ ಸಂಖ್ಯೆ ಎಷ್ಟಿದೆ?

Leave a Comment