ಶಿವಮೊಗ್ಗ: ಜಿಲ್ಲಾ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸದಸ್ಯರು ಹಾಗೂ ಕುಟುಂಬದವರಿಗೆ ಏ.9ರಂದು ನಗರದ ದುರ್ಗಿಗುಡಿ ಮುಖ್ಯರಸ್ತೆಯಲ್ಲಿನ ನಗರದ ತೃಪ್ತಿ ಹೆಲ್ತ್ ಕೇರ್‌ನಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ (health checkups) ಹಮ್ಮಿಕೊಳ್ಳಲಾಗಿದೆ ಎಂದು ಕಿಡ್ನಿ ಮತ್ತು ಮೂತ್ರರೋಗಗಳ ಶಸ್ತ್ರಚಿಕಿತ್ಸಾ ತಜ್ಞ ಡಾ.ಎಸ್.ಚಂದ್ರಶೇಖರ್ ತಿಳಿಸಿದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ.ರಾಘವೇಂದ್ರ ಶಿಬಿರ ಉದ್ಘಾಟಿಸಲಿದ್ದು, ಕಾರ್ಮಿಕರಿಗೆ ಹೆಲ್ತ್ ಕಾರ್ಡ್ ವಿತರಿಸಲಿದ್ದಾರೆ. ಉಚಿತ ಶಿಬಿರದಲ್ಲಿ ಯುರಾಲಜಿ ಕನ್ಸಲ್ಟೇಶನ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿಆರ್‌ಎಂ ಫ್ಲೋರೋಸ್ಕೋಪ್, ಎಕ್ಸ್ರೇ, ರಕ್ತ ಪರೀಕ್ಷೆ, ಗೈನಕಾಲಜಿಸ್ಟ್ ಅವರಿಂದಲೂ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು. ಜತೆಗೆ ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ಹಾಗೂ ಸೆಂಟ್ರಲ್ ಬ್ಯಾಂಕ್‌ನ ಜೀರೋ ಬ್ಯಾಲೆನ್ಸ್ ಅಕೌಂಟ್ ಮಾಡಿಸಿಕೊಡಲಾಗುವುದು.


ಐವತ್ತು ವರ್ಷ ಸಮಾಜದಿಂದ ಬಹಳಷ್ಟು ಪಡೆದುಕೊಂಡಿದ್ದೇನೆ. ನನ್ನ ಉಳಿದ ಜೀವನವನ್ನು ಸಮಾಜದ ಆರೋಗ್ಯ ಕಾಪಾಡಲು ಹಾಗೂ ಬಡವರಿಗೆ ಸಹಾಯ ಮಾಡಲು ವಿನಿಯೋಗಿಸಬೇಕು ಎಂದು ನಿರ್ಧರಿಸಿದ್ದೇನೆ ಡಾ.ಎಸ್.ಚಂದ್ರಶೇಖರ್ ಎಂದರು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಮಿನಿಸ್ಟರ್ ಕಚೇರಿ ಮುಂಭಾಗ ಪ್ರತಿಭಟನೆ, ಬೇಡಿಕೆ ಈಡೇರಿಕೆಗೆ ಪಟ್ಟು
