ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಹುಬ್ಬಳ್ಳಿಯ ಫಿಟ್ನೆಸ್ ಜಿಮ್‌ವೊಂದರಲ್ಲಿ (gym) ನಡೆದಿದೆ ಎನ್ನಲಾದ ಸಂಘಟಿತ ಲೈಂಗಿಕ ಶೋಷಣೆ, ಬ್ಲ್ಯಾಕ್‌ಮೇಲ್ ಹಾಗೂ ಮತಾಂತರ ಯತ್ನ ಪ್ರಕರಣವನ್ನು ಖಂಡಿಸಿ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಸಮೀರ್ ಮುಲ್ಲಾ ಮತ್ತು ಆತನ ಸಹೋದರಿ ತೈಸೀಮ್ ಮುಲ್ಲಾ ಈ ಕೃತ್ಯದ ಕಿಂಗ್‌ಪಿನ್‌ಗಳಾಗಿದ್ದು, ಇವರು ಜಿಮ್‌ಗೆ ಬರುವ ಹಿಂದೂ ಯುವತಿಯರಿಗೆ ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಅತ್ಯಾಚಾರವೆಸಗುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯುವತಿಯರ ಅರೆನಗ್ನ ಚಿತ್ರ ಹಾಗೂ ವಿಡಿಯೊಗಳನ್ನು ಸೆರೆಹಿಡಿದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ ಹಾಗೂ ಮತಾಂತರಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ತನಿಖೆಗೆ ಆಗ್ರಹ
ಹುಬ್ಬಳ್ಳಿ ಮಾತ್ರವಲ್ಲದೆ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಮಾದರಿಯಲ್ಲಿ ರಾಜ್ಯದಾದ್ಯಂತ ಜಿಮ್‌ಗಳ ಹೆಸರಿನಲ್ಲಿ ಇಂತಹ ಜಾಲಗಳು ಸಕ್ರಿಯವಾಗಿರುವ ಸಾಧ್ಯತೆ ಇದೆ. ಆದ್ದರಿಂದ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (SIT) ರಚಿಸಬೇಕು. ಆರೋಪಿಗಳ ಮೇಲೆ ಕೋಕಾ, ಪೋಕ್ಸೋ ಹಾಗೂ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಹಿಂದೂ ಜಾಗರಣ ಸಮಿತಿ ವತಿಯಂದ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗೆ, ತೀರ್ಥಹಳ್ಳಿ, ಶಿಕಾರಿಪುರದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಸೂಳೆಬೈಲಿನಲ್ಲಿ ಶೆಡ್ ಮೇಲೆ ತುಂಗಾ ನಗರ ಠಾಣೆ ಪೊಲೀಸರ ದಾಳಿ, ದಾಖಲಾಯ್ತು ಕೇಸ್

LATEST NEWS
- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

- ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

- ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

- ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್ 11 ಕೊನೆಯ ದಿನ

- ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು











