ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಯಶವಂತಪುರದಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ (Intercity Express) ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಳುವಾಗಿದೆ. ಬೆಂಗಳೂರಿನ ಸಹಕಾರನಗರ ನಿವಾಸಿ ವಿದ್ಯಾರಾಣಿ ಕೆ.ಎಂ. ಅವರು ಈ ಬಗ್ಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರಾಣಿ ಅವರು ಮಾರ್ಚ್ 2ರಂದು ಬೆಳಗ್ಗೆ ಯಶವಂತಪುರ-ಶಿವಮೊಗ್ಗ ಇಂಟರ್ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಲಗೇಜ್ ಸ್ಟ್ಯಾಂಡ್ ಮೇಲಿದ್ದ ಅವರ ಬ್ಯಾಗ್ ಬಳಿ ಇಬ್ಬರು ಅಪರಿಚಿತರು ಕುಳಿತಿದ್ದರು. ಮಧ್ಯಾಹ್ನ ಶಿವಮೊಗ್ಗಕ್ಕೆ ಬಂದು ಮನೆ ತಲುಪಿದ ನಂತರ ಬ್ಯಾಗ್ ಪರಿಶೀಲಿಸಿದಾಗ, ಅದರಲ್ಲಿದ್ದ ಪೌಚ್ ಹಾಗೂ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ : ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಏಪ್ರಿಲ್ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?
ಮೊದಲು ಈ ಬಗ್ಗೆ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆದ ಸ್ಥಳದ ವ್ಯಾಪ್ತಿಯ ಆಧಾರದ ಮೇಲೆ ಪ್ರಕರಣವನ್ನು ಈಗ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LATEST NEWS
- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

- ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

- ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

- ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್ 11 ಕೊನೆಯ ದಿನ

- ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು












