ಶಿವಮೊಗ್ಗ: ರಾಗಿಗುಡ್ಡ ಸಮೀಪದ ವೈನ್ ಸ್ಟೋರ್‌ವೊಂದರಲ್ಲಿ ಜಗಳ ಬಿಡಿಸಲು ಹೋದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ (knife attack) ಘಟನೆ ನಡೆದಿದೆ. ಹೊನ್ನಾಳಿ ರಸ್ತೆಯಲ್ಲಿರುವ ವೈನ್ ಸ್ಟೋರ್‌ನಲ್ಲಿ ಈ ಕೃತ್ಯ ಸಂಭವಿಸಿದೆ.
ಸುನಿಲ್ ಕುಮಾರ್ (27) ಹಲ್ಲೆಗೊಳಗಾದ ಯುವಕ. ಸದ್ಯ ಇವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ರಾಗಿಗುಡ್ಡದ ಸುನಿಲ್ ಕುಮಾರ್ ತಮ್ಮ ಸ್ನೇಹಿತ ರಘು ಎಂಬುವವರ ಜೊತೆ ಮದ್ಯಪಾನ ಮಾಡಲು ವೈನ್ ಸ್ಟೋರ್‌ಗೆ ಹೋಗಿದ್ದರು. ಈ ವೇಳೆ ಅಲ್ಲಿಯೇ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಜಗಳವಾಡುತ್ತಿದ್ದ. ಇದನ್ನು ಗಮನಿಸಿದ ಸುನಿಲ್ ಗಲಾಟೆ ಮಾಡದಂತೆ ತಿಳಿಹೇಳಲು ಹೋದಾಗ, ಆಕ್ರೋಶಗೊಂಡ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸುನಿಲ್ ಅವರ ಮುಖ, ತಲೆ ಹಾಗೂ ಕತ್ತಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಶಿವಮೊಗ್ಗದ ಸೆಂಟ್ರಲ್ ಜೈಲಿಗೆ ಚೌ ಚೌ ತಂದವನೆ ಜೈಲುಪಾಲು
ಗಾಯಾಳು ಸುನಿಲ್ ಕುಮಾರ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.