ರೈಲ್ವೆ ಸುದ್ದಿ: ಕಾರ್ಯಾಚರಣೆಯ ಕಾರಣಗಳಿಂದಾಗಿ, ಕೆಲವು ರೈಲುಗಳ (trains) ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಏಪ್ರಿಲ್ 24ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್ – ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ರಾತ್ರಿ 9:30ರ ಬದಲಿಗೆ ಇನ್ಮುಂದೆ 9:40ಕ್ಕೆ ಚಿಕ್ಕಮಗಳೂರ ನಿಲ್ದಾಣ ತಲುಪಲಿದೆ.

ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ದೈನಂದಿನ ಎಕ್ಸಪ್ರೆಸ್ ರೈಲು ಇನ್ನು ಮುಂದೆ ಚಿಕ್ಕಮಗಳೂರಿನಿಂದ ಬೆಳಿಗ್ಗೆ 8:15ರ ಬದಲಿಗೆ 8 ಗಂಟೆಗೆ ಹೊರಡಲಿದೆ. ಇದರೊಂದಿಗೆ ಮಧ್ಯಂತರ ನಿಲ್ದಾಣಗಳ ಸಮಯವನ್ನೂ ಪರಿಷ್ಕರಿಸಲಾಗಿದೆ. ಕಣಿವೆಹಳ್ಳಿಯಲ್ಲಿ 8:33/8:34ರ ಬದಲಿಗೆ 8:18/8:19, ಸಖರಾಯಪಟ್ಟಣದಲ್ಲಿ 8:46/8:47ರ ಬದಲಿಗೆ 8:31/8:32, ಬಿಸಲೇಹಳ್ಳಿಯಲ್ಲಿ 8:58/8:59ರ ಬದಲಿಗೆ 8:43/8:44 ಹಾಗೂ ಕಡೂರು ನಿಲ್ದಾಣಕ್ಕೆ 9:30/9:40ರ ಬದಲಿಗೆ 9:05/9:25ಕ್ಕೆ ರೈಲು ಆಗಮಿಸಿ, ನಿರ್ಗಮಿಸಲಿದೆ. ದೇವನೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರೈಲು ಸಂಖ್ಯೆ 16240 ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸಪ್ರೆಸ್ ರೈಲು ಚಿಕ್ಕಮಗಳೂರು ನಿಲ್ದಾಣಕ್ಕೆ ರಾತ್ರಿ 8:55ರ ಬದಲಿಗೆ 9:05ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






