ಶಿವಮೊಗ್ಗ ಲೈವ್.ಕಾಂ | SHIMOGA | 17 ಅಕ್ಟೋಬರ್ 2019
ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸುತ್ತಿದೆ. ಎರಡು ದಿನದಲ್ಲಿ ಜಿಲ್ಲೆಯಾದ್ಯಂತ ಭಾರಿ ದಂಡ ವಿಧಿಸಲಾಗಿದೆ.
ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಎರಡು ದಿನದಲ್ಲಿ 507 ಪ್ರಕರಣಗಳನ್ನು ದಾಖಲು ಮಾಡಿಕೊಂಡು ಸುಮಾರು 2.53 ಲಕ್ಷ ರೂ. ದಂಡ ವಿಧಿಸಲಾಗಿದೆ
ಕಾರ್ಯಾಚರಣೆಯ ಮೊದಲ ದಿನ ಅಕ್ಟೋಬರ್ 14ರಂದು ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 286 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಈ ಪೈಕಿ 180 ಕೇಸ್’ಗಳು ಶಿವಮೊಗ್ಗ ನಗರದಲ್ಲಿ ದಾಖಲಾಗಿವೆ.
ಅಕ್ಟೋಬರ್ 15ರಂದು ಜಿಲ್ಲೆಯಾದ್ಯಂತ 221 ಪ್ರಕರಣ ದಾಖಲಾಗಿದೆ. ಎರಡು ದಿನದ ದಾಖಲಾದ ಪ್ರಕರಣಗಳ ಪೈಕಿ, ಶೇ.90ರಷ್ಟು ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡಿದ ಪ್ರಕರಣಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೆಲ್ಮೆಟ್ ಕಡ್ಡಾಯ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವತಿಯಿಂದ ಜಾಗೃತಿ ಜಾಥಾ ನಡೆಸಲಾಗಿತ್ತು. ಆ ಬಳಿಕ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದು ಇನ್ನಷ್ಟು ದಿನ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದರೆ.
ಲಿಂಕ್ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ
- BREAKING NEWS | ಶಿವಮೊಗ್ಗ ಲೋಕಸಭೆಗೆ ಕಳೆದ ಬಾರಿಗಿಂತಲು ಹೆಚ್ಚು ಮತದಾನ, ಎಷ್ಟಾಗಿದೆ ವೋಟಿಂಗ್?
- ದುರ್ಗಿಗುಡಿ ಶಾಲೆ ಮತಗಟ್ಟೆ ಮುಂದೆ ಸರ್ವ ಪಕ್ಷದಿಂದ ಪ್ರತಿಭಟನೆ, ಕಾರಣವೇನು?
- ಶಿವಮೊಗ್ಗದಲ್ಲಿ ವೋಟಿಂಗ್ ಸಮಯ ಮುಕ್ತಾಯ, ಸಂಜೆ 5 ಗಂಟೆವರೆಗೆ ಎಷ್ಟಾಗಿದೆ ಮತದಾನ?
- ಮತಯಂತ್ರದಲ್ಲಿ ತಾಂತ್ರಿಕ ದೋಷ, ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಅರ್ಧ ಗಂಟೆಯಿಂದ ಮತದಾನ ಸ್ಥಗಿತ
- ಮತಗಟ್ಟೆಗೆ ಮೊಬೈಲ್ ನಿಷೇಧ, ಆದರೂ ಹೊರ ಬಂತು ಮತ ಚಲಾಯಿಸಿದ ವಿಡಿಯೋ