ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019
ಭಾರೀ ಮಳೆಗೆ ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೋರುತ್ತಿದೆ. ಗುರ್ಭಗುಡಿ ಒಳಗೆ ನೀರು ತೊಟ್ಟಿಕ್ಕುತ್ತಿರುವುದು, ಭಕ್ತರನ್ನು ಆತಂಕಕ್ಕೀಡು ಮಾಡಿದೆ. ದೇವಸ್ಥಾನಕ್ಕೆ ಹಾನಿ ಆಗುವ ಭೀತಿ ಎದುರಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದೇವಸ್ಥಾನದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ, ಪುರುಷೋತ್ತಮ, ವೇಣುಗೋಪಾಲ ಸ್ವಾಮಿ ದೇವರ ಗರ್ಭಗುಡಿ, ಶುಕನಾಸಿನಿ, ನವರಂಗ, ಹುಂಡಿ ಡಬ್ಬದ ಮೇಲೆ ನೀರು ಸೋರುತ್ತಿದೆ. ಇನ್ನು, ವಿದ್ಯುತ್ ಸ್ವಿಚ್’ಗಳಿರುವ ಭಾಗದಲ್ಲಿಯು ನೀರು ಸೋರುತ್ತಿದೆ.
ಮಳೆಯ ಪರಿಣಾಮ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಗೋಡೆಯು ಕರಗುತ್ತಿದೆ. ಈವರೆಗು ಸಣ್ಣ ಪ್ರಮಾಣದಲ್ಲಿ ಕರಗುತ್ತಿದ್ದ ಗೋಡೆ, ಈ ಬಾರಿ ಜೋರು ಮಳೆಯಿಂದಾಗಿ ಹೆಚ್ಚು ವೇಗವಾಗಿ ಕರಗುತ್ತಿದೆ. ದೇವಸ್ಥಾನದ ಕೆಲವು ಕಡೆ ಗೋಡೆ ಬಿರುಕು ಬಿಟ್ಟಿದೆ. ಅಲ್ಲಲ್ಲಿ ಕಲು ಜರಗುತ್ತಿದೆ. ಇದು ಅರ್ಚಕರು ಮತ್ತು ಭಕ್ತರಲ್ಲಿ ಭೀತಿ ಸೃಷ್ಟಿಸಿದೆ.
ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ
ಮಳೆ ನೀರು ಸೋರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಶೇಜೇಶ್ವರ್ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುರಾತನ ದೇವಸ್ಥಾನದ ಶಿಥಿಲವಾಗುತ್ತಿದೆ. ಸದ್ಯದಲ್ಲೇ ಎಂಜಿನಿಯರ್’ಗಳನ್ನು ಕರೆಸಿ, ಪುನರುತ್ಥಾನ ಕಾರ್ಯ ನಡೆಸಲಾಗುತ್ತದೆ ಎಂದರು.
ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಂಗನಾಥಶರ್ಮ, ಸಹಾಯಕ ಅರ್ಚಕ ಶ್ರೀನಿವಾಸನ್ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]