ಶಿವಮೊಗ್ಗ ಲೈವ್.ಕಾಂ | SHIMOGA | 24 ಅಕ್ಟೋಬರ್ 2019
ಗೂಗಲ್‌ನಲ್ಲಿ ಕೋರಿಯರ್‌ವೊಂದರ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕರೆ ಮಾಡಿದ ವ್ಕಕ್ತಿ 69,993 ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದಿಂದ ಮುಂಬೈಗೆ ಕೋರಿಯರ್ ಮೂಲಕ ದಾಖಲೆಗಳನ್ನು ಕಳುಹಿಸಿದ ಕೆಎಚ್‌ಬಿ ಕಾಲೊನಿಯ ಕರುಣಾಕರ್ ಎಂಬುವವರೇ ಮೋಸಹೋದ ವ್ಯಕ್ತಿ. ಅ.೧೮ರಂದು ಕೋರಿಯರ್ ಕಳುಹಿಸಿದ್ದು, ತಲುಪದೇ ಇದ್ದುದ್ದರಿಂದ ಶಿವಮೊಗ್ಗದಲ್ಲಿ ಪಾರ್ಸಲ್ ಹೋಗದ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಈ ಬಗ್ಗೆ ಮುಂಬೈ ಶಾಖೆಯಲ್ಲಿಯೇ ವಿಚಾರಿಸುವಂತೆ ಸೂಚಿಸಲಾಗಿದೆ. ಅದರಂತೆ, ಕರುಣಾಕರ್ ಅವರು ಗೂಗಲ್‌ನಲ್ಲಿ ಕೋರಿಯರ್‌ನ ಮುಂಬೈ ಕಸ್ಟಮರ್‌ಕೇರ್ ಸಂಖ್ಯೆ ಪಡೆದಿದ್ದಾರೆ.
ವಿಚಾರಿಸಿದಾಗ ದಾಖಲೆಗಳು ಮುಂಬೈಗೆ ಬಂದಿವೆ. ಆದರೆ, ಕೋರಿಯರ್ ಶುಲ್ಕದಲ್ಲಿ ಮೂರು ರೂ. ಕಡಿಮೆ ಪಾವತಿಸಿದ್ದಕ್ಕೆ ನಿಗದಿತ ಸ್ಥಳಕ್ಕೆ ತಲುಪಿಸಿಲ್ಲವೆಂದು ಮಾಹಿತಿ ನೀಡಿದ್ದಾರೆ. ಅದಕ್ಕಾಗಿ, ಬಾಕಿ ಹಣವನ್ನು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಪಾವತಿಸುವಂತೆ ತಿಳಿಸಿ, ಸಂಖ್ಯೆ ನೀಡಿದ್ದಾರೆ. ಸೂಚನೆಯನ್ವಯ ಹಣ ಕಳುಹಿಸಿದ್ದು, ಬಳಿಕ ಸಂಬಂಧಪಟ್ಟ ವ್ಯಕ್ತಿಯು ಲಿಂಕ್ ಫಾರ್ವರ್ಡ್ ಮಾಡಿದ್ದು, ಅದನ್ನು ಕ್ಲಿಕ್ಕಿಸುವಂತೆ ತಿಳಿಸಿದ್ದಾರೆ. ಅದಾದ ಕೆಲಹೊತ್ತಲ್ಲೇ ಖಾತೆಯಿಂದ 90 ಸಾವಿರ ರೂ. ಪೀಕಿದ್ದಾರೆ.
ಈ ಬಗ್ಗೆ ಬ್ಯಾಂಕ್‌ನಿಂದ ಎಸ್‌ಎಂಎಸ್ ಸಂದೇಶ ಬಂದ ತಕ್ಷಣ ಬ್ಯಾಂಕ್‌ನವರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನವರೂ ಉತ್ತಮ ಸ್ಪಂದನೆ ನೀಡಿ, ನಂತರ ವರ್ಗಾವಣೆ ಮಾಡಲಾದ ೨೦ ಸಾವಿರ ರೂ. ವಾಪಸ್ ಖಾತೆಗೆ ಜಮಾ ಮಾಡಿದ್ದಾರೆ. ಆದರೆ, ಮೊದಲ ಹಂತದಲ್ಲಿ ವರ್ಗಾಯಿಸಲಾದ 69,993 ರೂ. ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]