ಶಿವಮೊಗ್ಗ ಲೈವ್.ಕಾಂ | RIPPONPETE | 26 ಅಕ್ಟೋಬರ್ 2019
ಹುಂಚಾ ಸರ್ವೇ ನಂ. 69ರಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಸಾಗರ ಉಪವಿಭಾಗಾಧಿಕರಿ ಡಾ.ಎಲ್.ನಾಗರಾಜ್ ಅವರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾಗರ ಅರಣ್ಯ ಇಲಾಖೆ ಅಧಿಕಾರಿಗಳು, ಹೊಸನಗರ ತಹಸೀಲ್ದಾರ್ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ವೇಳೆ ಗ್ರಾಮಸ್ಥರು ಗಣಿಗಾರಿಕೆ ನಡೆಸದಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗೆ ಸೂಕ್ತ ವರದಿ ನೀಡುವಂತೆ ಒತ್ತಾಯಿಸಿದರು. ಗಣಿಗಾರಿಕೆ ವಿರೋಧಿಸಿ ಕಳೆದ ವಾರ ಹುಂಚಾ ನಾಡಕಚೇರಿ ಎದುರು 5 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಗಣಿಗಾರಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಎಸಿ ನಾಗರಾಜ್ ಸ್ಥಳ ಪರಿಶೀಲಿಸಿದರು. ಹುಂಚಾ ಭೂಮಿ ಮತ್ತು ಸಂರಕ್ಷಣಾ ಸಮಿತಿಯ ಸಂಚಾಲಕರು, ಸದಸ್ಯರು, ಹೊಂಡಲಗದ್ದೆ, ಅಳಲೆಕೊಪ್ಪ, ಮಳಲಿಕೊಪ್ಪ, ಈರನಬೈಲು, ನಾಗರಹಳ್ಳಿ, ಕುಟುಟಹಳ್ಳಿ ಗ್ರಾಮಸ್ಥರು ಹಾಜರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]