ಕಂಠಮಟ್ಟ ಕುಡಿದು ಹೊಟ್ಟೆ ತುಂಬಾ ಊಟ ಮಾಡಿ ಬಿಲ್‌ ಕೇಳಿದಾಗ ಬಿಯರ್‌ ಬಾಟಲಿಯಿಂದ ದಾಳಿ

Published On : ಏಪ್ರಿಲ್ 21, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಬಾರ್ ಒಂದರಲ್ಲಿ ಮದ್ಯ ಮತ್ತು ಊಟದ ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ನಾಲ್ವರು ವ್ಯಕ್ತಿಗಳು ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ (dispute).

ಇದನ್ನೂ ಓದಿ : ಊಟ ಮುಗಿಸಿ ಹಾಸ್ಟೆಲ್‌ನ ರೂಂಗೆ ಬಂದ ಇಂಜಿನಿಯರಿಂಗ್‌ ವಿದ್ಯಾರ್ಥಿಗೆ ಕಾದಿತ್ತು ಆಘಾತ

ಅಬ್ಬಲಗೆರೆಯ ದುರ್ಗಾ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ನಾಲ್ವರು ವ್ಯಕ್ತಿಗಳು ಮದ್ಯ ಸೇವಿಸಿ, ಊಟ ಮಾಡಿದ್ದರು. ಇದರ ಬಿಲ್‌ ಮೊತ್ತ ₹3000 ಆಗಿತ್ತು. ಮೊತ್ತ ಪಾವತಿಸುವಂತೆ ಬಾರ್‌ನ ಕಿಚನ್‌ ವಿಭಾಗದ ಉಸ್ತುವಾರಿ ಕೃಷ್ಣಮೂರ್ತಿ ಕೇಳಿದರು. ಆಗ ಹಣ ನೀಡಲು ನಿರಾಕರಿಸಿದ ನಾಲ್ವರು, ಗಲಾಟೆ ಆರಂಭಿಸಿದರು. ಜಗಳ ಬಿಡಿಸಲು ಬಂದ ಕೃಷ್ಣಮೂರ್ತಿ ಅವರ ಮಗ ಅಕ್ಷಯ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದ ಆರೋಪಿಸಲಾಗಿದೆ.

Shivamogga-Police-Jeep

ಆರೋಪಿಗಳು ಬೀಯರ್ ಬಾಟಲಿ ಮತ್ತು ಕೋಲಿನಿಂದ ಹೊಡೆದು ತಂದೆ-ಮಗನಿಗೆ ಗಾಯಗೊಳಿಸಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 21, 2026

Leave a Comment