ಶಿವಮೊಗ್ಗ ಲೈವ್
ಶಿವಮೊಗ್ಗ: ಹಾಸ್ಟೆಲ್‌ನ (JNNCE Hostel) ರೂಮ್‌ವೊಂದರಲ್ಲಿ ವಿದ್ಯಾರ್ಥಿಯೊಬ್ಬರ ಲ್ಯಾಪ್‌ಟಾಪ್ ಕಳುವಾಗಿದೆ. ಏಪ್ರಿಲ್ 14 ರ ಮಧ್ಯಾಹ್ನ ಘಟನೆ ನಡೆದಿದೆ.
ಇದನ್ನೂ ಓದಿ : ಶಿವಮೊಗ್ಗ JNN ಇಂಜಿನಿಯರಿಂಗ್ ಕಾಲೇಜಿನಲ್ಲಿ NES ಚಿನ್ನದ ಪದಕ ಪ್ರದಾನ

ನಗರದ ಜೆಎನ್‌ಎನ್‌ಸಿಇ ಕಾಲೇಜಿನ ತುಂಗಾ ಹಾಸ್ಟೆಲ್‌ನ ಕೊಠಡಿಯಲ್ಲಿ ಘಟನೆ ನಡೆದಿದೆ. ಕಾಲೇಜಿನ ಮೆಕ್ಯಾನಿಕಲ್ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿ ಕೆ.ಪಿ ಭುವನೇಶ್ ಎಂಬುವವರ ಲ್ಯಾಪ್‌ಟಾಪ್ ಕಳುವಾಗಿದೆ.

ಹೇಗಾಯ್ತು ಘಟನೆ?
ಭುವನೇಶ್ ಮಧ್ಯಾಹ್ನ ರೂಮ್‌ಗೆ ಬೀಗ ಹಾಕದೆ ಚಿಲಕ ಮಾತ್ರ ಹಾಕಿ ಊಟಕ್ಕೆ ತೆರಳಿದ್ದರು. ಈ ವೇಳೆ ಯಾರೋ ರೂಮ್ ಒಳಗೆ ನುಗ್ಗಿದ್ದಾರೆ. ಊಟ ಮುಗಿಸಿ ಭುವನೇಶ್ ರೂಮ್‌ಗೆ ಹಿಂತಿರುಗಿದಾಗ ₹76,591 ಮೌಲ್ಯದ ಡೆಲ್-ಜಿ-15 ಲ್ಯಾಪ್‌ಟಾಪ್ ಮತ್ತು ಅದರ ಚಾರ್ಜರ್ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ವಿನೋಬಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.