ಬಾಗಿಲಿನ ಬೀಗ ಒಡೆದು ಹಣ ಕಳವು, ಮನೆಯಲ್ಲೆಲ್ಲ ಖಾರದ ಪುಡಿ ಎರಚಿದ ಕಳ್ಳರು

ಸುದ್ದಿಯ ಹೈಲೈಟ್ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

  • ಶಿವಮೊಗ್ಗದಲ್ಲಿ ಮನೆ ಬೀಗ ಒಡೆದ ಕಳ್ಳರು
  • ₹10,000 ನಗದು ದೋಚಿ ಪರಾರಿ
  • ಸುಳಿವು ಸಿಗದಂತೆ ಮನೆಯಲ್ಲೆಲ್ಲ ಖಾರದ ಪುಡ ಎರಚಿದರು

ಶಿವಮೊಗ್ಗ: ಕುಟುಂಬದವರು ಇಲ್ಲದ ಸಮಯ ಮನೆಯೊಂದರ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ ನಗದು (cash) ದೋಚಿ ಕಳ್ಳರು ಪರಾರಿಯಾಗಿದ್ದಾರೆ.

Tunga-Nagara-Police-Station-Shimoga

ಶಿವಮೊಗ್ಗದ ಸಾಗರ ರಸ್ತೆಯ ವಾಜಪೇಯಿ ಬಡಾವಣೆಯ ಶ್ರೀರಂಗ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಶ್ರೀರಂಗ ಅವರು ಪತ್ನಿಯೊಂದಿಗೆ ತೀರ್ಥಹಳ್ಳಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

Tunga-Nagara-Police-Station-Shimoga

ಕಳ್ಳತನ ಮಾಡಿ ಖಾರದಿ ಪುಡಿ ಚೆಲ್ಲಿದ್ದಾರೆ

ಮದುವೆ ಸಮಾರಂಭ ಮುಗಿಸಿ ರಾತ್ರಿ ಶ್ರೀರಂಗ ಅವರು ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ಒಳ ನುಗ್ಗಿದ್ದಾರೆ. ರೂಂನಲ್ಲಿದ್ದ ಬೀರುವಿನ ಬೀಗವನ್ನು ಒಡೆದು ಅದರಲ್ಲಿದ್ದ ₹10,000 ನಗದು ಕಳವು ಮಾಡಿದ್ದಾರೆ. ಇನ್ನು, ಕಳ್ಳರು ಕುರುಹು ಸಿಗದಂತೆ ಮನೆಯೊಳಗೆ ಖಾರದ ಪುಡಿಯನ್ನು ಎರಚಿ ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮಹಿಳಾ ಡಾಕ್ಟರ್‌ಗೆ ಅವಾಚ್ಯವಾಗಿ ನಿಂದನೆ, ಅಸಭ್ಯ ವರ್ತನೆ, ವ್ಯಕ್ತಿ ವಿರುದ್ಧ ದೂರು

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment