ಮಹಿಳಾ ಡಾಕ್ಟರ್‌ಗೆ ಅವಾಚ್ಯವಾಗಿ ನಿಂದನೆ, ಅಸಭ್ಯ ವರ್ತನೆ, ವ್ಯಕ್ತಿ ವಿರುದ್ಧ ದೂರು

ಹೊಳೆಹೊನ್ನೂರು: ಮಹಿಳಾ ಡಾಕ್ಟರ್‌ (lady doctor)ಜೊತೆಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜನವರಿ 7ರಂದು ಘಟನೆ ಸಂಭವಿಸಿದ್ದು ಮೇಲಾಧಿಕಾರಿಗಳಿಂದ ಅನುಮತಿ ಪಡೆದು ವೈದ್ಯೆ ತಡವಾಗಿ ದೂರು ದಾಖಲಿಸಿದ್ದಾರೆ.

ಹೊಳೆಹೊನ್ನೂರು ಸಮೀಪದ ಸನ್ಯಾಸಿ ಕೋಡಮಗ್ಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ ರೋಗಿಗಳು ಇಲ್ಲದ ಸಮಯದಲ್ಲಿ ವೈದ್ಯಾಧಿಕಾರಿ ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ, ಡಾ. ಹಂಸವೇಣಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Holehonnuru-Police-Station-Bhadravathi-jpg

ಇದನ್ನೂ ಓದಿ : ಕುಡುಮಲ್ಲಿಗೆ ಬಳಿ ಹೆದ್ದಾರಿ ಪಕ್ಕದ ಮರದಲ್ಲಿ ದಿಢೀರ್‌ ಬೆಂಕಿ, ಕೆಲ ಹೊತ್ತು ವಾಹನ ಸಂಚಾರ ವ್ಯತ್ಯಯ

ವ್ಯಕ್ತಿಯು ಸರ್ಕಾರಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ವೈದ್ಯೆ ಮೇಲಾಧಿಕಾರಿಗಳ ಅನುಮತಿ ಪಡೆದು ತಡವಾಗಿ ದೂರು ನೀಡಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment