ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ನವೆಂಬರ್ 2019
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ.. ಆದ್ರೆ ಈಗ ಟಿಪ್ಪುಸುಲ್ತಾನರನ್ನ ಪಠ್ಯದಿಂದ ಕೈಬಿಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಚೈತನ್ಯ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಟಿಪ್ಪು ಜಯಂತಿ ಬೇಡ ಎಂದರೆ ಮಾಡಬೇಡಿ. ಸ್ವಾತಂತ್ರ್ಯ ಪೂರ್ವ ಹೋರಾಟದಲ್ಲಿ ಟಿಪ್ಪು ಹಾಗೂ ಹೈದರಾಲಿ ಹೋರಾಟವನ್ನ ಮರೆಯಲು ಸಾಧ್ಯವಿಲ್ಲ. ಟಿಪ್ಪು ಮತ್ತು ಹೈದರಾಲಿ ಮೈಸೂರು ಯುದ್ದ ಮಾಡಿದ್ದು ಸುಳ್ಳಾ ಎಂದು ಪ್ರಶ್ನಿಸಿದ ಅವರು, ಇದೇ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ನಾನೇ ಟಿಪ್ಪು ಎಂದು ಖಡ್ಗ ಹಿಡಿದು ನಿಂತಿದ್ದರು. ಜಗದೀಶ್ ಶೆಟ್ಟರ್ ಟಿಪ್ಪುವಿನ ಕುರಿತ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ಅವರದ್ದು ಎರಡು ನಾಲಿಗೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ನಾನು ಟಿಪ್ಪು ಜಯಂತಿ ಮಾಡಿದೆ ಯಾಕೆಂದರೆ ಟಿಪ್ಪು ಚಾರಿತ್ರಿಕ ವ್ಯಕ್ತಿ, ಪುರಾಣದ ವ್ಯಕ್ತಿಯಲ್ಲ. ನಿಮಗೆ ಟಿಪ್ಪು ಜಯಂತಿ ಇಷ್ಟವಿಲ್ಲದಿದ್ದರೆ ಮಾಡಬೇಡಿ. ಆದರೆ ಪುಸ್ತಕದಿಂದ ಕೈಬಿಡಬೇಡಿ. ಕೈಬಿಟ್ಟರೆ ಚರಿತ್ರೆ ಅಪೂರ್ಣಗೊಳ್ಳುತ್ತದೆ ಎಂದು ಟೀಕಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]