ಥೈಲ್ಯಾಂಡ್‌ನಲ್ಲಿ ಗೆದ್ದ ಶಿವಮೊಗ್ಗದ ಈಜುಪಟುಗಳು, ಯಾರೆಲ್ಲ ಗೆಲುವು ಸಾಧಿಸಿದ್ದಾರೆ?

ಶಿವಮೊಗ್ಗ: ಥೈಲ್ಯಾಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ಹಾಗೂ ವಿವಿಧ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಶಿವಮೊಗ್ಗದ ಈಜುಪಟುಗಳು (Shivamogga swimmers) ಪದಕ ಗೆದ್ದಿದ್ದಾರೆ. ಸಾಧನೆ ಮಾಡಿದ ಈಜುಪಟುಗಳನ್ನು ಮಲೆನಾಡು ಶಿವಮೊಗ್ಗ ಸ್ವಿಮ್ಮಿಂಗ್ ಅಸೋಸಿಯೇಷನ್ ವತಿಯಿಂದ ಗೌರವಿಸಲಾಯಿತು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ವಿಶ್ವ ಮಟ್ಟದಲ್ಲಿ ಮಿಂಚಿದ ಮಾಸ್ಟರ್ ಸ್ವಿಮ್ಮರ್‌ಗಳು

ಏಪ್ರಿಲ್ 17 ರಿಂದ 20 ರವರೆಗೆ ಥೈಲ್ಯಾಂಡ್‌ನ ಶ್ರೀರಾಚಾದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಸ್ಪೋರ್ಟ್ಸ್ ಫೆಡರೇಶನ್ ಚಾಂಪಿಯನ್‌ಶಿಪ್‌ ನಡೆಯಿತು. ಶಿವಮೊಗ್ಗದ ಮಾಸ್ಟರ್ ಸ್ವಿಮ್ಮರ್‌ಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದಾರೆ. ಇನ್ನು, ವಿವಿಧ ಸ್ಪರ್ಧಗಳಲ್ಲಿಯು ಶಿವಮೊಗ್ಗದ ಈಜುಪಟುಗಳು ಸಾಧನೆ ಮಾಡಿದ್ದಾರೆ.

Swimming-champions-of-Shimoga-Gopala-sports-complex

Swimming-champions-of-Shimoga-Gopala-sports-complex

ಎಲ್ಲೆಲ್ಲಿ ಯಾರೆಲ್ಲ ಪದಕ ಗೆದ್ದಿದ್ದಾರೆ?

  • ವಿಶ್ವ ಮಾಸ್ಟರ್ಸ್ ಮತ್ತು ಹೈದರಾಬಾದ್ ಸ್ವಿಮ್ ಮೀಟ್: ಡಾ. ರವಿ ಕುಮಾರ್, ಡಾ. ವಿದ್ಯಾ ರಮೇಶ್, ಶಶಿ ಕುಮಾರ್, ಶುಷ್ಮಾ, ಲಾವಣ್ಯ ಮತ್ತು ಅಶಿಕಾ ದೀಪಕ್.
  • ಓಪನ್ ವಾಟರ್ ವಿಜೇತರು: ಲಿಂಗರಾಜ್ ಮತ್ತು ಪ್ರಾಚಿ.
  • ಐರನ್ ಮ್ಯಾನ್ ವಿಜೇತ: ಹರ್ಷ.
  • ಪ್ರಾದೇಶಿಕ ಸ್ವಿಮ್ಮಿಂಗ್ ಮೀಟ್ (ಬೆಂಗಳೂರು): ಕೆವಿನ್ ಜೆ, ಲತಿಕಾ ಮತ್ತು ತಾನ್ವಿ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಯುವಕನ ತಲೆಯಲ್ಲಿ ಸಿಲುಕಿದ ಮಚ್ಚು, ಅದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು, ಏನಿದು ಕೇಸ್‌?

ಗೋಪಾಳದ ಶಿವಮೊಗ್ಗ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪದಕ ವಿಜೇತ ಈಜುಪಟುಗಳಿಗೆ MSSA ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪದಕ ವಿಜೇತರು, ಅವರ ಪೋಷಕರು ಸೇರಿ ಹಲವರು ಪಾಲ್ಗೊಂಡಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment