ಸಾಗರ: ತಾಲೂಕಿನ ಸಿರಿವಂತೆ – ಗಾಳಿಪುರ ಮಾರ್ಗ ಮಧ್ಯೆ ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಹುಣಸೂರು ಮೂಲದ ಅಶೋಕ್ (25) ಎಂದು ಗುರುತಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಹೇಗಾಯ್ತು ಅಪಘಾತ?
ಸಾಗರ ಕಡೆಗೆ ಬರುತ್ತಿದ್ದ ಬಸ್ಸು ಸಿರಿವಂತೆ ಮತ್ತು ಗಾಳಿಪುರ ರಸ್ತೆ ಮಧ್ಯೆ ಬೈಕ್ಗೆ ಡಿಕ್ಕಿ ಹೊಡೆದಿದೆ. ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಅಶೋಕ್ ಅವರಿಗೆ ತೀವ್ರ ಗಾಯವಾಗಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ.


ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಮಳೆಯಿಂದ ಹಾನಿ, ಬಿಜೆಪಿ ನಿಯೋಗದಿಂದ ಮನವಿ, ಏನಿದೆ?
