ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 6 ನವೆಂಬರ್ 2019
ಶಿವಮೊಗ್ಗ ನಗರದ ಹೈಪರ್ ಮಾರ್ಕೆಟ್ ಒಂದರಲ್ಲಿ ಕಡಿಮೆ ರೇಟಿಗೆ ಈರುಳ್ಳಿ ಮಾರಾಟ ಮಾಡುವುದಾಗಿ ಕೂಪನ್ ಹಂಚಿಕೆ ಮಾಡಿ, ಬಳಿಕ ವಂಚಿಸಿದ್ದಾರೆ ಎಂದು ಗ್ರಾಹಕರು ಗಲಾಟೆ ಮಾಡಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ಹೈಪರ್ ಮಾರ್ಕೆಟ್ ಸಿಬ್ಬಂದಿ ನಿರಾಕರಿಸಿದೆ.
ಹೈಪರ್ ಮಾರ್ಕೆಟ್’ನ ಗ್ರಾಹಕರಿಗೆ ನವೆಂಬರ್ 6ರಂದು ಪ್ರತಿ ಕೆ.ಜಿ. ಈರುಳ್ಳಿಗೆ 19 ರೂ. ಎಂದು ಕೂಪನ್ ಹಂಚಲಾಗಿತ್ತು. ಕೂಪನ್ ಇದ್ದ ಗ್ರಾಹಕರು ಈರುಳ್ಳಿ ಖರೀದಿಗೆ ಬಂದಾಗ ಹೈಪರ್ ಮಾರ್ಕೆಟ್ ಸಿಬ್ಬಂದಿ ಬೇರೆಯದ್ದೆ ರೂಲ್ಸ್ ತಿಳಿಸಿದ್ದಾರೆ. ಅಲ್ಲದೆ ಈರುಳ್ಳಿಗೆ ದುಬಾರಿ ಬೆಲೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಹಕರು ಗಲಾಟೆ ಮಾಡಿದ್ದಾರೆ.
ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಲು ಬೆಳಗ್ಗೆಯಿಂದಲು ನಿರಂತರವಾಗಿ ಬರುತ್ತಿರುವ ಗ್ರಾಹಕರು, ಹೈಪರ್ ಮಾರ್ಕೆಟ್ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು, ಗೊಂದಲದ ಕುರಿತು ಸ್ಪಾರ್ ಸಿಬ್ಬಂದಿಯನ್ನು ಶಿವಮೊಗ್ಗ ಲೈವ್.ಕಾಂ ಸಂಪರ್ಕಿಸಿದಾಗ ಪ್ರತಿಕ್ರಿಯೆಗೆ ನಿರಾಕರಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು





