VISL ಕಾರ್ಮಿಕ ವಿನೋದ್‌ ಕುಟುಂಬಕ್ಕೆ ಆಸರೆಯಾದ ಎಂಎಲ್‌ಎ

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕರ ಸಂಘದ ಮಾಜಿ ಉಪಾಧ್ಯಕ್ಷ ವಿನೋದ್ ಅವರ ಕುಟುಂಬಕ್ಕೆ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಮೂಲಕ ಗರಿಷ್ಠ ಮೊತ್ತದ ನೆರವು ಕೊಡಿಸುವುದಾಗಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ತಿಳಿಸಿದ್ದಾರೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ವಿಐಎಸ್‌ಎಲ್‌ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೇಶ್ವರ, ವಿನೋದ್‌ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಶಾಸಕ ಸಂಗಮೇಶ್ವರ, ಬಿ.ಎಸ್.‌ಗಣೇಶ್‌ ಸಾಂತ್ವನ: ತಕ್ಷಣದ ಆರ್ಥಿಕ ನೆರವಿನ ಜೊತೆ ಉದ್ಯೋಗದ ವಾಗ್ದಾನ

ವಿನೋದ್‌ ಕುಟುಂಬಕ್ಕೆ ನೆರುವು, MLA ಏನೆಲ್ಲ ಹೇಳಿದರು?

  • ಶಾಶ್ವತ ಉದ್ಯೋಗ: ಭಾರತೀಯ ಉಕ್ಕು ಪ್ರಾಧಿಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಮೃತರ ಅವಲಂಬಿತರಿಗೆ ಶಾಶ್ವತ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿದೆ.
  • ತಕ್ಷಣದ ಆರ್ಥಿಕ ನೆರವು: ಗುತ್ತಿಗೆದಾರರ ಕಡೆಯಿಂದ ₹8 ಲಕ್ಷ ಪರಿಹಾರ ಕೊಡಿಸಲಾಗಿದೆ. ವೈಯಕ್ತಿಕವಾಗಿ ₹50,000 ಸಹಾಯ ಮಾಡಲಾಗಿದೆ.
  • ಸಿಎಂ ರಿಲೀಫ್‌ ಫಂಡ್: ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಅಡಿ ಪರಿಹಾರ ಕೊಡಿಸಲಾಗುತ್ತದೆ.
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಶಾಸಕ ಸಂಗಮೇಶ್ವರ, ಬಿ.ಎಸ್.‌ಗಣೇಶ್‌ ಸಾಂತ್ವನ: ತಕ್ಷಣದ ಆರ್ಥಿಕ ನೆರವಿನ ಜೊತೆ ಉದ್ಯೋಗದ ವಾಗ್ದಾನ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್. ಗಣೇಶ್, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ವಿನೋದ್‌ಗಾಗಿ ಕಂಬನಿ ಮಿಡಿದ ಭದ್ರಾವತಿ, VISLನಿಂದ ಮಹತ್ವದ ನಿರ್ಧಾರ ಪ್ರಕಟ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment