ಶಿವಮೊಗ್ಗ ಜಿಲ್ಲೆಯ ಹವಾಮಾನ; ಇವತ್ತು ವಿವಿಧೆಡೆ ಬಿಸಿಲು, ಮೋಡ, ಮಳೆ, ಎಲ್ಲೆಲ್ಲಿ ಹೇಗಿರುತ್ತೆ ವಾತಾವರಣ?

ಹವಾಮಾನ ವರದಿ: ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದರಿಂದ ಜಿಲ್ಲೆಯ ತಾಪಮಾನ ತುಸು ತಗ್ಗಿತ್ತು. ಈಗ ಪುನಃ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ (weather). ➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲಿನ ಅಬ್ಬರ ಇರಲಿದೆ. ಮೈ ಸುಡುವ ಬಿಸಿಲಿನ ಮಧ್ಯೆ ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯು ಇದೆ ಎಂದು ಆಕ್ಯು ವೆದರ್‌ ವರದಿಯಲ್ಲಿ ತಿಳಿಸಲಾಗಿದೆ.

Shivamogga-Weather-Report

ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

ಶಿವಮೊಗ್ಗ, ಭದ್ರಾವತಿ: ಜಿಲ್ಲಾ ಕೇಂದ್ರದಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ ಮೋಡದ ವಾತಾವರಣ ಇರುವ ಸಾಧ್ಯತೆ ಇದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ಅಬ್ಬರ ಇರುವ ಸಾಧ್ಯತೆ ಇದೆ.

ತೀರ್ಥಹಳ್ಳಿ: ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮೋಡ ಮುಸುಕಿದ ವಾತಾವರಣ. ಬಿಸಿಲು ಪ್ರಖರತೆ.

Shivamogga-Weather-Report

ಹೊಸನಗರ: ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮೋಡದ ವಾತಾವರಣ, ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.

ಇದನ್ನೂ ಓದಿ : ಆಯನೂರು ಸಂತೆ; ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನಲ್ಲಿ ಬಂದವರಿಂದ ಮಾಂಗಲ್ಯ ಸರ ಅಪಹರಣ

ಸಾಗರ: ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಆಗಾಗ ಬಿಸಿಲು ಮತ್ತು ಮೋಡ ಇರುವ ಸಾಧ್ಯತೆ ಇರಲಿದೆ.

JNN College of Engineering Admissions started

ಇದನ್ನೂ ಓದಿ : ಯಶವಂತಪುರ – ತಾಳಗುಪ್ಪ ಮಧ್ಯೆ ಬೇಸಿಗೆ ವಿಶೇಷ ರೈಲು, ವೇಳಾಪಟ್ಟಿ ಪ್ರಕಟ

ಸೊರಬ: ಇಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದೆ. ದಿನವಿಡೀ ಬಹುತೇಕ ಬಿಸಿಲಿನಿಂದ ಕೂಡಿದ ವಾತಾವರಣ ಇರಲಿದೆ.

ಶಿಕಾರಿಪುರ: ತಾಲೂಕಿನಲ್ಲಿ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಭಾಗಶಃ ಮೋಡ ಇರಲಿದೆ. ಬಿಸಿಲು ಕೂಡ ಇರಲಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಕೊಡಚಾದ್ರಿ ಟ್ರೆಕ್ಕಿಂಗ್‌: ಹೃದಯಾಘಾತದಿಂದ ಸಿನಿಮಾ ನಿರ್ಮಾಪಕನ ಪುತ್ರ ಸಾವು