ಆಟೊಮೊಬೈಲ್ ಸುದ್ದಿ: ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ಬಹುನಿರೀಕ್ಷಿತ ಟಾಟಾ ಕರ್ವ್ ಇವಿ ಸಿರೀಸ್-ಎಕ್ಸ್ (Tata Curvv EV Series-X) ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಂದು ಫುಲ್ ಚಾರ್ಜ್ಗೆ ಈ ಕಾರು 502 ಕಿಲೋ ಮೀಟರ್ ಮೈಲೇಜ್ ನೀಡಲಿದೆ.
ಸ್ಟೈಲಿಷ್ ಡಿಸೈನ್, ಆಶ್ಚರ್ಯಕರ ಮೈಲೇಜ್
ಟಾಟಾ ಕರ್ವ್ ಇವಿ ಸಿರೀಸ್-ಎಕ್ಸ್ ಕಾರು ಎಲೆಕ್ಟ್ರಿಕ್ ವಾಹನಗಳ ಲೋಕದಲ್ಲಿ ಸಂಚಲನ ಮೂಡಿಸಿದೆ. ಅತ್ಯಂತ ಸ್ಟೈಲಿಷ್ ಆಗಿ ಕಾಣುವ ಕಾರು ಅತ್ಯಂತ ಬಲಿಷ್ಠ ಬ್ಯಾಟರಿ ಹೊಂದಿದೆ. ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಕಾರು ಬರೋಬ್ಬರಿ 502 ಕಿಲೋಮೀಟರ್ಗಳವರೆಗೆ ಚಲಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : ವಾಟ್ಸಪ್ನಿಂದ ಮತ್ತೊಂದು ಫೀಚರ್ ಔಟ್, ಯಾವುದದು? ಕಾರಣವೇನು?
ಬ್ಯಾಟರಿಗೆ ಲೈಫ್ ಟೈಮ್ ವಾರಂಟಿ
ದೂರದ ಊರುಗಳಿಗೆ ಪ್ರಯಾಣಿಸುವವರಿಗೂ ಇದು ನೆಮ್ಮದಿಯ ಆಯ್ಕೆಯಾಗಲಿದೆ ಎಂದು ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಕಾರಿನ ಬ್ಯಾಟರಿ ಬಗ್ಗೆ ಗ್ರಾಹಕರ ಆತಂಕ ದೂರ ಮಾಡಲು ಟಾಟಾ ಸಂಸ್ಥೆ ಬ್ಯಾಟರಿಗೆ ಲೈಫ್ಟೈಮ್ ವಾರಂಟಿ ಘೋಷಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಐಷಾರಾಮಿ ಸೌಲಭ್ಯಗಳು
ಕಾರಿನ ಒಳಾಂಗಣವು ಐಷಾರಾಮಿಯಾಗಿದೆ. ಚಾಲಕ ಮತ್ತು ಪ್ರಯಾಣಿಕರಿಗೆ ಆಧುನಿಕ ಸೌಲಭ್ಯ ನೀಡಲಾಗಿದೆ. ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಗಟ್ಟಿಮುಟ್ಟಾದ ಬಾಡಿ ಮತ್ತು ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ.
Does the new Tata Curvv EV Series-X offer a 502 km range and a lifetime battery warranty? Check out the price, features, and luxury interior of Tata’s latest electric SUV.







