ವಾಟ್ಸಪ್‌ನಿಂದ ಮತ್ತೊಂದು ಫೀಚರ್‌ ಔಟ್‌, ಯಾವುದದು? ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಟೆಕ್‌ ಸುದ್ದಿ: ಇನ್ಮುಂದೆ ವಾಟ್ಸಪ್‌ನಲ್ಲಿ (WhatsApp) ಅವತಾರ (Avatar) ಫೀಚರ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಬಳಕೆದಾರರಿಗೂ ಈ ಬದಲಾವಣೆ ಅನ್ವಯಿಸಲಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.

ಏನಿದು ಅವತಾರ್‌ ಫೀಚರ್‌?

ಅವತಾರ ಫೀಚರ್ ಮೂಲಕ ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮನ್ನು ಹೋಲುವ ಡಿಜಿಟಲ್‌ ಬೊಂಬೆಗಳನ್ನು ಸಿದ್ಧಪಡಿಸುತ್ತಿದ್ದರು. ಇನ್ನು ಮುಂದೆ ಈ ಅವತಾರ ಕ್ರಿಯೇಟ್ ಮಾಡಲು ಅಥವಾ ಎಡಿಟ್ ಮಾಡಲು ಅವಕಾಶವಿ ಇರುವುದಿಲ್ಲ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಯಾವಾಗ ಸ್ಥಗಿತ ಆಗಲಿದೆ?

ಹಂತ ಹಂತವಾಗಿ ಈ ಬದಲಾವಣೆ ಜಾರಿಗೆ ಬರುತ್ತಿದೆ. ಈಗಾಗಲೇ ಕೆಲವು ಬಳಕೆದಾರರಿಗೆ ಸೆಟ್ಟಿಂಗ್ಸ್‌ನಲ್ಲಿ ಈ ಆಯ್ಕೆಯು ಕಾಣಿಸುತ್ತಿಲ್ಲ. ಇನ್ನು ಕೆಲವರಿಗೆ ‘ಅವತಾರಗಳನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಶೀಘ್ರ ಇವು ಪ್ರೊಫೈಲ್‌ನಿಂದ ಕಾಣೆಯಾಗಲಿವೆʼ ಎಂಬ ಅಲರ್ಟ್‌ ಲಭ್ಯವಾಗುತ್ತಿದೆ.

Whatsapp-General-Image

Whatsapp-General-Image
  • ಪ್ರೊಫೈಲ್ ಫೋಟೋಗೆ ಅವತಾರಗಳನ್ನು ಸೆಟ್ ಮಾಡಿದ್ದರೆ, ಅವು ಶೀಘ್ರದಲ್ಲೇ ಮಾಯವಾಗಲಿವೆ.
  • ವಾಟ್ಸಾಪ್ ಕೀಬೋರ್ಡ್‌ನಲ್ಲಿ ಸ್ಟಿಕ್ಕರ್‌ಗಳ ಪಕ್ಕದಲ್ಲಿ ಇರುತ್ತಿದ್ದ ಅವತಾರ ಐಕಾನ್ ತೆಗೆದುಹಾಕಲಾಗುತ್ತಿದೆ.
  • ಫೇವರೆಟ್ಸ್ ವಿಭಾಗದಲ್ಲಿ ಸೇವ್ ಮಾಡಿಕೊಂಡಿರುವ ಸ್ಟಿಕ್ಕರ್‌ಗಳು ಸದ್ಯಕ್ಕೆ ಲಭ್ಯವಿ ಇರಲಿವೆ. ಆದರೆ ಹೊಸದಾಗಿ ಅವುಗಳ ನಿರ್ವಹಣೆ ಸಾಧ್ಯವಿಲ್ಲ.

ಅವತಾರ ಯಾಕೆ ತೆಗೆಯಲಾಗುತ್ತಿದೆ?

ಅವತಾರ ಫೀಚರ್‌ ತೆಗೆದುಹಾಕಲಾಗುತ್ತಿದೆ ಎಂಬ ಬಗ್ಗೆ ವಾಟ್ಸಾಪ್ ಯಾವುದೇ ಕಾರಣ ನೀಡಿಲ್ಲ. ಆದರೆ ಅಪ್ಲಿಕೇಶನ್ ಅನ್ನು ಸರಳಗೊಳಿಸಲು ಅಥವಾ ಹೊಸ ಫೀಚರ್‌ಗಳಿಗೆ ಜಾಗ ಮಾಡಿಕೊಡಲು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಬಿಸ್ನೆಸ್‌ ಟುಡೆ ಮಾಧ್ಯಮ ತಿಳಿಸಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಲಾರಿ ಹಿಂಬದಿಗೆ ಕಾರು ಡಿಕ್ಕಿ, ಭದ್ರಾವತಿಯ ಯುವಕ ಮಣಿಪಾಲದಲ್ಲಿ ಸಾವು