ಸೊರಬ, ಆನವಟ್ಟಿಯ ವಿವಿಧೆಡೆಗೆ ಮಿನಿಸ್ಟರ್‌ ಭೇಟಿ, ಕಾಮಗಾರಿಗಳಿಗೆ ಶಂಕುಸ್ಥಾಪನೆ

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಎರಡು ದಿನ ಜಿಲ್ಲೆಯ ಸೊರಬ ಮತ್ತು ಆನವಟ್ಟಿ ಭಾಗದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಮೇ 8 ರಂದು ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ರಸ್ತೆ ಮೂಲಕ ಹೊರಟು ಜಿಲ್ಲೆಗೆ ಆಗಮಿಸಲಿದ್ದಾರೆ.

ಯಾವ್ಯಾವ ದಿನ ಏನೇನು ಕಾರ್ಯಕ್ರಮ?

ಮೇ 8 ರಂದು ಸೊರಬ ತಾಲೂಕಿನ ವಿವಿಧೆಡೆ ನಡೆಯಲಿರುವ ಉದ್ಘಾಟನಾ ಸಮಾರಂಭಗಳಲ್ಲಿ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ.

  • ಬೆಳಿಗ್ಗೆ 10:30: ಮುಟುಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದಗಿ ಗ್ರಾಮದ ಕಾಲಭೈರವೇಶ್ವರ ದೇವಸ್ಥಾನ ಉದ್ಘಾಟನೆ.
  • ಮಧ್ಯಾಹ್ನ 12:00: ನಿಸರಾಣಿ ಗ್ರಾಮ ಪಂಚಾಯಿತಿಯ ಕ್ಯಾಸನೂರು ಗ್ರಾಮದಲ್ಲಿ ಮಾರಿಕಾಂಬ ದೇವಸ್ಥಾನ ಉದ್ಘಾಟನೆ.
  • ಮಧ್ಯಾಹ್ನ 1:30: ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ.
  • ಮಧ್ಯಾಹ್ನ 2:30: ಚಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾಡಲಕೊಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ.
Madhu-Bangarappa-meeting-at-Shimoga-DC-office.

ಮೇ 9ರಂದು ಸಚಿವ ಮಧು ಬಂಗಾರಪ್ಪ ಆನವಟ್ಟಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಶೈಕ್ಷಣಿಕ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ.

  • ಬೆಳಿಗ್ಗೆ 10: ಆನವಟ್ಟಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದಿಂದ ಆಯೋಜಿಸಿರುವ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
  • ಬೆಳಿಗ್ಗೆ 11: ಆನವಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
  • ಬೆಳಿಗ್ಗೆ 11:30: ಹಂಚಿ ಗ್ರಾಮ ಪಂಚಾಯಿತಿಯ ಹಂಚಿ ಗ್ರಾಮದಲ್ಲಿ ಬಸ್ ನಿಲ್ದಾಣದಿಂದ ಕುಣಿತೆಪ್ಪಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ.
  • ಮಧ್ಯಾಹ್ನ 12:30: ಕುಣಿತೆಪ್ಪ ಗ್ರಾಮದಲ್ಲಿ ಹವಳಮ್ಮ ದೇವಸ್ಥಾನದಿಂದ ಹಂಚಿ ಮುಖ್ಯ ರಸ್ತೆವರೆಗೆ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ.
  • ಮಧ್ಯಾಹ್ನ 3: ಭಾರಂಗಿ ಗ್ರಾಮ ಪಂಚಾಯಿತಿಯ ಗುಡ್ಡದ ಬೆಣ್ಣಿಗೆರೆಯಿಂದ ಭಾರಂಗಿ ಗ್ರಾಮಕ್ಕೆ ಹೋಗುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ.
  • ಸಂಜೆ 4: ಭಾರಂಗಿ ಗ್ರಾಮದ ಬಸ್ ನಿಲ್ದಾಣದಿಂದ ಬೆಣ್ಣಿಗೆರೆಗೆ ಹೋಗುವ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ.

ಸಚಿವರು ಮೇ 9ರ ಸಂಜೆ 5 ಗಂಟೆಗೆ ಆನವಟ್ಟಿಯಿಂದ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರ ವಿಶೇಷ ಕರ್ತವ್ಯವಾಧಿಕಾರಿ ತಿಳಿಸಿದ್ದಾರೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 6, 2026 at 8:59 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 6, 2026