ಯುವತಿ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ; ಫೋಟೋ ಎಡಿಟ್ ಮಾಡಿ ವಿಕೃತಿ

ತೀರ್ಥಹಳ್ಳಿ: ಯುವತಿಯೊಬ್ಬಳ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ (Fake Instagram account) ತೆರೆದು, ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಾನಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ನಿವಾಸಿ ಮತ್ತು ತೀರ್ಥಹಳ್ಳಿಯ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ಈ ಹಿಂದೆ ಶಿವಮೊಗ್ಗದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ನಂತರ ಯುವತಿ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ಆದರೆ ಆ ವ್ಯಕ್ತಿ ಪದೇ ಪದೆ ಕರೆ ಮಾಡಿ ಶಿವಮೊಗ್ಗಕ್ಕೆ ಬರುವಂತೆ ಒತ್ತಾಯಿಸಿ ಕಿರುಕುಳ (Harassment) ನೀಡುತ್ತಿದ್ದ ಎನ್ನಲಾಗಿದೆ.

instagram.webp

ಕೊನೆಗೆ ಯುವತಿಗೆ ಗೊತ್ತಿಲ್ಲದೆ ಆಕೆಯ ಹೆಸರಿನಲ್ಲೇ ಸಾಮಾಜಿಕ ಜಾಲತಾಣದ ಖಾತೆ (Social media profile) ತೆರೆದಿದ್ದ ವ್ಯಕ್ತಿ, ಅದರಲ್ಲಿ ಆಕೆಯ ಫೋಟೋಗಳನ್ನು ಎಡಿಟ್‌ (Photo morphing) ಮಾಡಿ ಅಪ್‌ಲೋಡ್ ಮಾಡಿದ್ದ. ಈ ಸೈಬರ್ ಅಪರಾಧಕ್ಕೆ (Cyber crime) ತೀರ್ಥಹಳ್ಳಿಯ ವ್ಯಕ್ತಿಯೊಬ್ಬ ಫೋಟೋಗಳನ್ನು ಕಳುಹಿಸುವ ಮೂಲಕ ಸಹಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನು ಪ್ರಶ್ನಿಸಿದಾಗ ಆರೋಪಿಯು ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಜೀವ ಬೆದರಿಕೆ (Death threat) ಒಡ್ಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕೃತ್ಯವು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act violation) ಬರುವ ಸಾಧ್ಯತೆಯಿದ್ದು, ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ (FIR registration) ದಾಖಲಾಗಿದೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 7, 2026 at 5:40 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 7, 2026