ಶಿಕಾರಿಪುರ: ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು (Child marriage) ಅಧಿಕಾರಿಗಳು ತಡೆದಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ (Children’s home) ಕಳುಹಿಸಿಕೊಟ್ಟಿದ್ದಾರೆ. ಇನ್ನು, ಮದುವೆಗೆ ಮುಂದಾಗಿದ್ದ ಬಾಲಕಿಯ ಕುಟುಂಬದ 9 ಮಂದಿ ಪ್ರಕರಣ ದಾಖಲಾಗಿದೆ.
ಶಾಸ್ತ್ರಗಳು ನಡೆಯುತ್ತಿದ್ದಾಗ ದಾಳಿ
ಅಪ್ರಾಪ್ತ ಬಾಲಕಿಯೊಬ್ಬಳಿಗೆ (Minor girl) ಆಕೆಯ ಮನೆಯವರು ವಿವಾಹ ನಿಶ್ಚಯಿಸಿ, ಮದುವೆ ಶಾಸ್ತ್ರಗಳನ್ನು ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡವು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದಾಗ ಮದುವೆ ವಿಧಿವಿಧಾನಗಳು ಪ್ರಗತಿಯಲ್ಲಿತ್ತು. ಕೂಡಲೇ ಅಧಿಕಾರಿಗಳು ಬಾಲಕಿಯನ್ನು ಕುಟುಂಬದವರಿಂದ ರಕ್ಷಿಸಿದ್ದಾರೆ (Rescue operation).

ಮದುವೆಗೆ ಸಹಕರಿಸಿದವರು ಮತ್ತು ಬಾಲ್ಯ ವಿವಾಹಕ್ಕೆ ಮುಂದಾದವರ ವಿರುದ್ಧ ಅಧಿಕಾರಿಗಳು ದೂರು (Legal complaint) ನೀಡಿದ್ದಾರೆ. ಅದರಂತೆ ಶಿರಾಳಕೊಪ್ಪ ಪೊಲೀಸರು ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ 2016ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ (FIR registered). ಈ ಪ್ರಕರಣವು ಮಕ್ಕಳ ಹಕ್ಕುಗಳ (Child rights) ಉಲ್ಲಂಘನೆಯಡಿ ಗಂಭೀರವಾಗಿ ಪರಿಗಣಿಸಲ್ಪಟ್ಟಿದೆ.
