ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019
ಒಂದು ಗಂಟೆಗು ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಶಿವಮೊಗ್ಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ರಸ್ತೆ ಮೇಲೆ ಮೊಣಕಾಲುದ್ದ ನೀರು ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ನಗರದ ಹೃದಯ ಭಾಗದಲ್ಲೇ ಚರಂಡಿಗಳು ತುಂಬಿ ಹರಿದವು. ರಸ್ತೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ದ್ವಿಚಕ್ರ ವಾಹನ ಸವಾರರು ಎಚ್ಚರದಿಂದ ವಾಹನ ಚಲಾಯಿಸುವಂತಾಯಿತು.
ಕಾಂಗ್ರೆಸ್ ಕಚೇರಿ ಮುಂದೆ ನೀರೋ ನೀರು
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಇರುವ ರಸ್ತೆಯಲ್ಲಿ ಭಾರಿ ನೀರು ಹರಿಯುತ್ತಿತ್ತು. ಈ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದ್ದ ವಾಹನಗಳು ನೀರಿನ ರಭಸಕ್ಕೆ ಕೆಳಗೆ ಬಿದ್ದವು. ವಾಹನ ಸವಾರರು ಕೂಡ ಆಯಾತಪ್ಪಿ ಬೀಳುವಂತಾಯಿತು. ಬಾಲರಾಜ ಅರಸ್ ರಸ್ತೆಯಿಂದ ಈ ರಸ್ತೆಗೆ ಬರುವ ವಾಹನ ಸವಾರರು ಬಹಳ ಕಿರಿಕಿರಿ ಅನುಭವಿಸಿದರು.
ಸೆಲ್ಲರ್’ಗಳಿಗೆ ನುಗ್ಗಿದ ನೀರು
ನಗರದ ವಿವಿಧೆಡೆ ಕಟ್ಟಡಗಳ ಸಲ್ಲರ್’ಗಳಿಗೆ ಮಳೆ ನೀರು ನುಗ್ಗಿದೆ. ಎನ್.ಟಿ.ರಸ್ತೆಯಲ್ಲಿರುವ ವಾಹನಗಳ ಶೋ ರೂಂನ ಸೆಲ್ಲರ್’ನಲ್ಲಿರುವ ಗ್ಯಾರೇಜುಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಇದರಿಂದ ಶೋಂ ರೂಂ ಮಾಲೀಕರಿಗೆ ನಷ್ಟ ಉಂಟಾಗಿದೆ. ಎನ್.ಟಿ.ರಸ್ತೆಯ ಮೇಲೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಸಾಗರ ರೋಡ್’ನಲ್ಲಿ ನೀರೋ ನೀರು
ಶಿವಮೊಗ್ಗ – ಸಾಗರ ವಿವಿಧೆಡೆಯು ನೀರು ನಿಂತಿದೆ. ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಬಳಿ, ಆಲ್ಕೊಳ ಸರ್ಕಲ್ ಸೇರಿದಂತೆ ವಿವಿಧೆಡೆ ಮಳೆ ನೀರು ಹರಿದು ಹೋಗಲು ಜಾಗವಿಲ್ಲದೆ ರಸ್ತೆ ಮೇಲೆ ನೀರು ನಿಂತಿದೆ.
ಟ್ಯಾಂಕ್ ಮೊಹಲ್ಲಾದಲ್ಲಿ ಮತ್ತೆ ಢವಢವ
ಭಾರಿ ಮಳೆಯಿಂದಾಗಿ ನಿನ್ನೆ ರಾತ್ರಿ ಟ್ಯಾಂಕ್ ಮೊಹಲ್ಲಾದ ಮನೆಗಳಿಗೆ ನೀರು ನುಗ್ಗಿತ್ತು. ಇವತ್ತು ಮತ್ತೆ ಮಳೆಯಾಗಿದ್ದರಿಂದ ರಸ್ತೆ ಮೇಲೆ ಮತ್ತೆ ನೀರು ನಿಂತಿದೆ. ರಾತ್ರಿಯು ಮಳೆಯಾದರೆ ಮನೆಗಳಿಗೆ ನೀರು ನುಗ್ಗುವ ಆತಂಕದಲ್ಲಿ ಜನರಿದ್ದಾರೆ.
ಮುಳುಗಿದ ಸ್ಮಾರ್ಟ್ ಸಿಟಿ ಕಾಮಗಾರಿ
ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ರಸ್ತೆಗಳಲ್ಲಿ ಗುಂಡಿ ತೋಡಲಾಗಿತ್ತು. ಸತತ ಒಂದು ಗಂಟೆಗು ಹೆಚ್ಚು ಕಾಲ ಮಳೆ ಸುರಿದಿದ್ದರಿಂದ, ಗುಂಡಿಗಳಲ್ಲಿ ನೀರು ತುಂಬಿದೆ. ಮಳೆ ನೀರು ನಿಂತ ಗುಂಡಿಗಳಿಗೆ ಸಿಮೆಂಟ್ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು
ಶಿವಮೊಗ್ಗ ನಗರದಾದ್ಯಂತ ರಸ್ತೆಗಳು ಗುಂಡಿ ಬಿದ್ದು ತಿಂಗಳುಗಳೆ ಉರುಳಿವೆ. ಈವರೆಗು ಗುಂಡಿ ಮುಚ್ಚುವ ಕೆಲಸ ಆಗಿಲ್ಲ. ಭಾರಿ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತಿದೆ. ಕೆಲವು ಕಡೆ ಗುಂಡಿಗಳಿರುವುದೆ ಗೊತ್ತಾಗುವುದಿಲ್ಲ. ಇದರಿಂದ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಇನ್ನು, ಗುಂಡಿಗಳಿಂದಾಗಿಯೆ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಒಂದು ಗಂಟೆಗು ಹೆಚ್ಚು ಕಾಲ ಸುರಿದ ಭಾರಿ ಮಳೆ, ಗಾಳಿಗೆ ಶಿವಮೊಗ್ಗ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]