ಶಿವಮೊಗ್ಗ: ಪವಾಡ ಬಯಲು ಮೂಲಕ ಹೆಸರಾಗಿರುವ ಹುಲಿಕಲ್ ನಟರಾಜ್ ನೇತೃತ್ವದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ನ ರಾಜ್ಯ ಸಮಿತಿಗೆ ಗೌರವಾಧ್ಯಕ್ಷರಾಗಿ ನಿವೃತ್ತ ಡಿಡಿಪಿಐ ಸುಮಂಗಲಾ ಪಿ. ಕುಚಿನಾಡ ಇವರು ನೇಮಕವಾಗಿದ್ದಾರೆ. ಸುಮಂಗಳಾ ಅವರು ಶಿಕ್ಷಣ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2026ನೇ ಸಾಲಿನ ಕಾಯಕಯೋಗಿ ರಾಜ್ಯ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ.

