NEWS HIGHLIGHTS
ಕಾರ್ಗಲ್: ಸಾಗರ ತಾಲೂಕು ಕಾರ್ಗಲ್ ಸಮೀಪದ ಜೋಗದ ನಿವಾಸಿ, ಅಂಚೆ ಇಲಾಖೆಯ (Postal Department) ನಿವೃತ್ತ ಸೇವಕ (Retired employee) ಗಾಸ್ಸಾರಿ ಮಿರಾಂದ (62) ಗುರುವಾರ ಬೆಳಿಗ್ಗೆ ಜೋಗ ಶಿರೂರು ಕೆರೆ ಪವರ್ ಚಾನಲ್‌ಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ಖಿನ್ನತೆಗೆ (Depression) ಒಳಗಾಗಿದ್ದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕಾರ್ಗಲ್ ಪೊಲೀಸ್ ಠಾಣಾ (Kargal Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
