‘ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ’, ಇನ್ಮುಂದೆ 108 ಆಂಬುಲೆನ್ಸ್‌ಗಳಿಗೆ ಹೈಟೆಕ್‌ CCC ಬಲ

ಬೆಂಗಳೂರು: ಇದುವರೆಗೆ ಖಾಸಗಿ ಸಹಭಾಗಿತ್ವದಲ್ಲಿದ್ದ ದೇಶದ ಮೊದಲ 108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಸಿಸಿಸಿ) ಇನ್ಮುಂದೆ ಸಂಪೂರ್ಣವಾಗಿ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕೇಂದ್ರವನ್ನು ಉದ್ಘಾಟಿಸಿದರು.

‘ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ’ ಎಂಬ ಘೋಷವಾಕ್ಯದೊಂದಿಗೆ ಆರಂಭವಾಗಿರುವ ಈ ನೂತನ ವ್ಯವಸ್ಥೆಯು 24X7 ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟು 50 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

Ambulance-command-Control-room.

ಹೇಗಿದೆ ನೂತನ ವ್ಯವಸ್ಥೆ?

  • 108 ಆರೋಗ್ಯ ಕವಚ ಕೇಂದ್ರದೊಂದಿಗೆ ಆರೋಗ್ಯ ಸಹಾಯವಾಣಿ 104, 112 ಸಹಾಯವಾಣಿ, ಟೆಲಿ ಮಾನಸ್, ಇ-ಸಂಜೀವಿನಿ, ಮಹಿಳಾ ಸಹಾಯವಾಣಿ 181 ಮತ್ತು ಮಕ್ಕಳ ಸಹಾಯವಾಣಿ 1098 ಸೇವೆಗಳನ್ನು ಸಂಯೋಜಿಸಲಾಗಿದೆ.
  • ಸಿ-ಡಾಕ್ ಸಂಸ್ಥೆ ಸಿದ್ಧಪಡಿಸಿರುವ ಸಾಫ್ಟ್‌ವೇರ್ ಮೂಲಕ ತುರ್ತು ಸಂದರ್ಭದಲ್ಲಿ ಕರೆ ಮಾಡಿದ ವ್ಯಕ್ತಿಯ ನಿಖರ ಸ್ಥಳವನ್ನು (ಲೋಕೇಶನ್) ಕಮಾಂಡ್ ಸೆಂಟರ್ ಸುಲಭವಾಗಿ ಪತ್ತೆ ಹಚ್ಚಲಿದೆ.
  • ಎಲ್ಲ 715 ಆಂಬುಲೆನ್ಸ್‌ಗಳಿಗೂ ಜಿಪಿಎಸ್ ಅಳವಡಿಸಲಾಗಿದೆ. ಅವುಗಳ ಚಲನವಲನವನ್ನು ನಿಖರವಾಗಿ ತಿಳಿಯಬಹುದು. ಕರೆ ಮಾಡಿದ ಸಾರ್ವಜನಿಕರ ಮೊಬೈಲ್‌ಗೆ ಆಂಬುಲೆನ್ಸ್ ಮಾಹಿತಿ ಮತ್ತು ತಲುಪುವ ಸಮಯದ ಸಂದೇಶ ರವಾನೆಯಾಗಲಿದೆ.
  • ತುರ್ತು ಸಂದರ್ಭ ಆಂಬುಲೆನ್ಸ್ ಸಿಬ್ಬಂದಿ ಎಂಡಿಟಿ ಟ್ಯಾಬ್ ಮೂಲಕ ತಜ್ಞ ವೈದ್ಯರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬಹುದು ಹಾಗೂ ಚಿಕಿತ್ಸೆ ನೀಡಲಿರುವ ಆಸ್ಪತ್ರೆಗೆ ಮುಂಚಿತವಾಗಿಯೇ ಸಂದೇಶ ರವಾನಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸಬಹುದು.

ಗೋಲ್ಡನ್ ಅವರ್ ಚಿಕಿತ್ಸೆಗೆ ಆದ್ಯತೆ

ರಸ್ತೆ ಅಪಘಾತ, ಹೆರಿಗೆ, ಹೃದಯಾಘಾತ ಸೇರಿ ಕ್ಲಿಷ್ಟ ಸಂದರ್ಭ ಘಟನೆ ಸಂಭವಿಸಿದ ಒಂದು ಗಂಟೆಯೊಳಗೆ ಚಿಕಿತ್ಸೆ ದೊರೆತರೆ ರೋಗಿ ಬದುಕುವ ಸಾಧ್ಯತೆ ಶೇ.80ರಷ್ಟು ಹೆಚ್ಚಿರುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸರ್ಕಾರದ ಧನಸಹಾಯ ಕೇಳುವ ಬದಲು, ಸಾರ್ವಜನಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಆಶ್ರಯಿಸಬೇಕು. ಸರ್ಕಾರಿ ಆರೋಗ್ಯ ಸೇವೆ ಕಳಪೆಯಾಗದಂತೆ ಇಲಾಖೆಯ ಸಿಬ್ಬಂದಿ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp