ಶಿವಮೊಗ್ಗದ ಅಶ್ವಥನಗರದಲ್ಲಿ ರಾತ್ರೋರಾತ್ರಿ ಪಲ್ಸರ್‌ 150 ಬೈಕ್‌ ಮಿಸ್ಸಿಂಗ್

ಶಿವಮೊಗ್ಗ: ನಗರದ ಅಶ್ವಥನಗರದ ಮನೆಯೊಂದರ ಮುಂದೆ ನಿಲ್ಲಿಸಲಾಗಿದ್ದ ಪಲ್ಸರ್‌ 150 ಬೈಕ್ ಕಳ್ಳತನವಾಗಿದೆ. ಇಂಜಿನಿಯರ್ ಅರುಣ್‌ಕುಮಾರ್.ಟಿ ಅವರು ಮೇ 25ರಂದು ರಾತ್ರಿ ಕಚೇರಿ ಕೆಲಸ ಮುಗಿಸಿ ಅಶ್ವಥನಗರದ ತಮ್ಮ ಮನೆ ಬಂದು ಬೈಕ್‌ ನಿಲ್ಲಿಸಿದ್ದರು.

ಮರುದಿನ ಬೆಳಗ್ಗೆ ಕೆಲಸಕ್ಕೆ ಹೊರಡಲು ಮನೆಯಿಂದ ಹೊರ ಬಂದಾಗ ಬೈಕ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಹ್ಯಾಂಡ್ ಲಾಕ್ ಮಾಡಿದ್ದ ಬೈಕನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bike theft reference image

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp