ಶಿವಮೊಗ್ಗ: ಜಿಲ್ಲೆಯ ಪ್ರಮುಖ ಜಲಾಶಯಗಳಾದ ಭದ್ರಾ, ಲಿಂಗನಮಕ್ಕಿ ಮತ್ತು ತುಂಗಾ ಜಲಾಶಯಗಳ ಜೂನ್ 1ರ ನೀರಿನ ಮಟ್ಟದ ವಿವರ
ಭದ್ರಾ ಜಲಾಶಯ
ಒಟ್ಟು 71.535 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಇಂದು ಬೆಳಗಿನ ವರದಿಯ ಅನ್ವಯ ನೀರಿನ ಮಟ್ಟ 137 ಅಡಿ 2 ಇಂಚು ದಾಖಲಾಗಿದೆ. ಪ್ರಸ್ತುತ ಡ್ಯಾಂನಲ್ಲಿ 25.024 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ ಸದ್ಯ 175 ಕ್ಯೂಸೆಕ್ ಒಳಹರಿವು ಇದೆ. ಎಡ-ಬಲದಂಡೆ ನಾಲೆಗಳು ಹಾಗೂ ನದಿಗೆ ಸೇರಿ ಒಟ್ಟು 499 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 142 ಅಡಿ 1 ಇಂಚು ಇತ್ತು. 28.336 ಟಿಎಂಸಿ ನೀರಿನ ಸಂಗ್ರಹವಿತ್ತು ಹಾಗೂ 3,055 ಕ್ಯೂಸೆಕ್ ಒಳಹರಿವು ಇತ್ತು.

ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಇಂದಿನ ಮಟ್ಟ 1752.95 ಅಡಿಗೆ ಇಳಿಕೆಯಾಗಿದೆ. ಸದ್ಯ ಜಲಾಶಯಕ್ಕೆ 797 ಕ್ಯೂಸೆಕ್ ಒಳಹರಿವು ಇದೆ. ವಿದ್ಯುತ್ ಉತ್ಪಾದನೆಗಾಗಿ ಪೆನ್ಸ್ಟಾಕ್ ಹಾಗೂ ಸ್ಲೂಯಿಸ್ ಗೇಟ್ಗಳ ಮೂಲಕ ಒಟ್ಟು 4,398 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂನಲ್ಲಿ 20.80 ಟಿಎಂಸಿ ನೀರು ಸಂಗ್ರಹವಿದೆ. ಇನ್ನು ಕಳೆದ ವರ್ಷ ಜೂನ್ 1ರಂದು ಜಲಾಶಯದ ನೀರಿನ ಮಟ್ಟ 1766.50 ಅಡಿ ಇದ್ದು, 35.13 ಟಿಎಂಸಿ ನೀರಿನ ಸಂಗ್ರಹವಿತ್ತು.
ತುಂಗಾ ಜಲಾಶಯ
ಗಾಜನೂರಿನ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಇಂದಿನ ನೀರಿನ ಮಟ್ಟ 586.78 ಮೀಟರ್ ಇದೆ. ಜಲಾಶಯದ ಒಟ್ಟು ಸಾಮರ್ಥ್ಯ 3.24 ಟಿಎಂಸಿ ಆಗಿದ್ದು, ಪ್ರಸ್ತುತ 1.606 ಟಿಎಂಸಿ ಸಂಗ್ರಹವಿದೆ. ಸದ್ಯ 150 ಕ್ಯೂಸೆಕ್ ಒಳಹರಿವು ದಾಖಲಾಗಿದೆ. 90 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಮಟ್ಟ 587.72 ಮೀಟರ್ ಇತ್ತು. 5,435 ಕ್ಯೂಸೆಕ್ ಒಳಹರಿವು ಹಾಗೂ ಅಷ್ಟೇ ಪ್ರಮಾಣದ ಹೊರಹರಿವು ಇತ್ತು.

