ಅಡಿಕೆ ಧಾರಣೆ: ಶಿವಮೊಗ್ಗ, ತೀರ್ಥಹಳ್ಳಿಯಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

MARKET NEWS: ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (APMC) ನಾಲ್ಕು ವಿಧದ ಅಡಿಕೆಗಳ ಇಂದಿನ ಕನಿಷ್ಠ ಮತ್ತು ಗರಿಷ್ಠ ದರದ ವಿವರ ಇಲ್ಲಿದೆ.

ಶಿವಮೊಗ್ಗ ಮಾರುಕಟ್ಟೆ

ಸರಕು ವಿಧದ ಅಡಿಕೆಗೆ ಕನಿಷ್ಠ ₹63,989 ಹಾಗೂ ಗರಿಷ್ಠ ₹86,609 ದರ ಲಭಿಸಿದೆ. ಬೆಟ್ಟೆ ಅಡಿಕೆಯು ಕನಿಷ್ಠ ₹55,009 ರಿಂದ ಗರಿಷ್ಠ ₹61,309 ರವರೆಗೆ ಮಾರಾಟವಾಗಿದೆ. ರಾಶಿ ಇಡಿ ವಿಧದ ಅಡಿಕೆಗೆ ಕನಿಷ್ಠ ₹45,109 ಹಾಗೂ ಗರಿಷ್ಠ ₹53,509 ದರ ಸಿಕ್ಕಿದೆ. ಇನ್ನು ಗೊರಬಲು ಅಡಿಕೆಯು ಕನಿಷ್ಠ ₹19,109 ರಿಂದ ಗರಿಷ್ಠ ₹43,059 ರವರೆಗೆ ವಹಿವಾಟು ನಡೆಸಿದೆ.

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ

ತೀರ್ಥಹಳ್ಳಿ ಮಾರುಕಟ್ಟೆ

ಗೊರಬಲು ಪ್ರಬೇಧದ ಅಡಿಕೆಗೆ ಕನಿಷ್ಠ ಹಾಗೂ ಗರಿಷ್ಠ ಎರಡು ಧಾರಣೆಯೂ ಕ್ವಿಂಟಲ್‌ಗೆ ₹30,000 ಆಗಿ ದಾಖಲಾಗಿದೆ. ಅದೇ ರೀತಿ, ರಾಶಿ ಪ್ರಬೇಧದ ಅಡಿಕೆಯು ಕನಿಷ್ಠ ಮತ್ತು ಗರಿಷ್ಠ ಕ್ವಿಂಟಲ್‌ಗೆ ₹51,804 ರಂತೆ ವಹಿವಾಟು ನಡೆಸಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp