ಸಚಿವರಾಗ್ತಾರಾ ಸಂಗಮೇಶ್ವರ? ನಿಜವಾಗುತ್ತಾ ಅಂದು ನೀಡಿದ್ದ ಭರವಸೆ?

POLITICAL NEWS: ಡಿ.ಕೆ.ಶಿವಕುಮಾರ್‌ ಅವರ ಸಂಪುಟದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಹೆಸರು ಚಾಲ್ತಿಯಲ್ಲಿದೆ. ಅನುಭವ, ಹಿರಿತನ, ಪಕ್ಷ ನಿಷ್ಠೆ, ಸಚಿವ ಸ್ಥಾನ ವಂಚಿತ ಸೇರಿದಂತೆ ಎಲ್ಲ ಮಾನದಂಡಗಳ ಅಡಿಯು ಸಂಗಮೇಶ್ವರ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದೇ ಕಾರಣಕ್ಕೆ ಈ ಬಾರಿ ಸಂಗಮೇಶ್ವರ ಅವರು ಮಿನಿಸ್ಟರ್‌ ಆಗುವುದು ಪಕ್ಕಾ ಎಂಬುದು ಅವರ ಬೆಂಬಲಿಗರ ಲೆಕ್ಕಾಚಾರ.

ಹಿರಿತನ, ನಾಲ್ಕು ಬಾರಿ ಎಂಎಲ್‌ಎ

ಶಾಸಕ ಸಂಗಮೇಶ್ವರ ಅವರು ಕಾಂಗ್ರೆಸ್‌ ಪಕ್ಷದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಭದ್ರಾವತಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮೊದಲ ಬಾರಿ ಶಾಸಕರಾಗಿದ್ದಾಗ ಜೆಡಿಎಸ್-‌ ಬಿಜೆಪಿ ಸಮ್ಮಿಶ್ರ ಸರ್ಕಾರವಿತ್ತು. ಹಾಗಾಗಿ ಸಂಗಮೇಶ್ವರ ಅವರು ಸಚಿವರಾಗುವ ಅವಕಾವೇ ಇಲ್ಲದಾಯಿತು. ಎರಡನೇ ಬಾರಿ ಎಂಎಲ್‌ಎ ಆದಾಗ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಮೂರನೇ ಬಾರಿ ಶಾಸಕರಾದಾಗಲು ಇದೇ ಸ್ಥಿತಿ ಇತ್ತು. ನಾಲ್ಕನೆ ಬಾರಿ ಎಂಎಲ್‌ಎ ಆದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅದರೆ ಸಂಗಮೇಶ್ವರ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆಯಲಿಲ್ಲ.

BK-Sangameshwara-Bhadravathi-MLA.

‘ಗೆಲ್ಲಿಸಿ ಕಳಿಸಿ, ಮಿನಿಸ್ಟರ್‌ ಮಾಡ್ತೀನಿʼ

ಶಿವಮೊಗ್ಗ ಜಿಲ್ಲೆಯ ಆರು ಕ್ಷೇತ್ರಗಳ ರಾಜಕಾರಣ ಒಂದು ದಿಸೆಯಾದರೆ, ಭದ್ರಾವತಿಯದ್ದು ವಿಭಿನ್ನ. ಇಲ್ಲಿನ ರಾಜಕಾರಣ ಅತ್ಯಂತ ಸೂಕ್ಷ್ಮ. ಇದೇ ಕಾರಣಕ್ಕೆ ಶಾಸಕರಾಗಿದ್ದರು ಸಂಗಮೇಶ್ವರ ಅವರ ಮೇಲೆ ಹಲವು ಒತ್ತಡಗಳಿದ್ದವು. ಇಷ್ಟಾಗಿಯು ಕಾಂಗ್ರೆಸ್‌ ತೊರೆಯದೆ ಭದ್ರಾವತಿಯಲ್ಲಿ ಅವರು ಗಟ್ಟಿಯಾಗಿ ನೆಲೆ ನಿಂತರು. ಹಾಗಾಗಿಯೇ ಭದ್ರಾವತಿಯಲ್ಲಿ ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು, ‘ಸಂಗಮೇಶ್ವರ ಅವರನ್ನು ಗೆಲ್ಲಿಸಿ ಕಳುಹಿಸಿ, ಮಿನಿಸ್ಟರ್‌ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದರು. ಸಿದ್ದರಾಮಯ್ಯ ಅವರ ಭರವಸೆ, ಡಿ.ಕೆ.ಶಿವಕುಮಾರ್‌ ಅವರ ಜೊತೆಗೆ ಒಡನಾಟ ಗಮನಿಸಿದಾಗ ಸಂಗಮೇಶ್ವರ ಸಚಿವರಾಗುತ್ತಾರೆ ಎಂದೇ ಅವರ ಬೆಂಬಲಿಗರ ನಂಬಿಕೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp