ನವದೆಹಲಿ: ಮಾರುಕಟ್ಟೆಯಲ್ಲಿ ಮಾರಾಟವಾಗುವ ಖಾದ್ಯ ತೈಲದ ಪ್ಯಾಕೆಟ್‌ಗಳ ಗಾತ್ರವನ್ನು ಏಕರೂಪಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಪಾರದರ್ಶಕತೆ ಮೂಡಲಿದೆ. ಗ್ರಾಹಕರಿಗೆ ವಂಚನೆಯಾಗುವುದು ತಪ್ಪಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು 850 ಮಿ.ಲೀ, 875 ಮಿ.ಲೀ, 900 ಮಿ.ಲೀ ಹಾಗೂ 950 ಮಿ.ಲೀ ನಂತಹ ವಿಭಿನ್ನ ಗಾತ್ರದ ಪ್ಯಾಕೆಟ್‌ಗಳಲ್ಲಿ ಖಾದ್ಯ ತೈಲವನ್ನು ಮಾರಾಟ ಮಾಡುತ್ತಿವೆ. ಇಂತಹ ಗೊಂದಲಕಾರಿ ಅಳತೆಗಳ ಪ್ಯಾಕೆಟ್‌ಗಳಿಂದಾಗಿ ಗ್ರಾಹಕರಿಗೆ ವಿವಿಧ ಬ್ರಾಂಡ್‌ಗಳ ನಿಜವಾದ ದರವನ್ನು ಪರಸ್ಪರ ಹೋಲಿಕೆ ಮಾಡಿ ಖರೀದಿಸಲು ಸಾಧ್ಯವಾಗುತ್ತಿಲ್ಲ.

ಗುಣಮಟ್ಟ ಆಧಾರಿತ ಖರೀದಿಗೆ ಅವಕಾಶ
ಪ್ಯಾಕೆಟ್‌ಗಳ ಗಾತ್ರ ಮತ್ತು ಪ್ರಮಾಣ ಏಕರೂಪವಾದರೆ, ಗ್ರಾಹಕರು ಕೇವಲ ಬೆಲೆಯನ್ನಷ್ಟೇ ಅಲ್ಲದೆ ತೈಲದ ಗುಣಮಟ್ಟ ಮತ್ತು ಶುದ್ಧತೆಯ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಈ ಹೊಸ ನಿಯಮ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆಯಿದೆ.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
