ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮಳೆಯಾಗಲಿದೆ. ಸಾಗರ, ಹೊಸನಗರ ಭಾಗದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಎಲ್ಲೆಲ್ಲಿ ಹೇಗಿರುತ್ತೆ ವಾತಾವರಣ?
ಶಿವಮೊಗ್ಗ: ಮೋಡ ಕವಿದ ವಾತಾವರಣ. ಮಳೆ ಸುರಿಯಲಿದೆ. ಗರಿಷ್ಠ ತಾಪಮಾನ 26°C ಹಾಗೂ ಕನಿಷ್ಠ 22°C ದಾಖಲಾಗಲಿದೆ.

ಭದ್ರಾವತಿ: ಮಳೆ ಸುರಿಯಲಿದೆ. ಗರಿಷ್ಠ 26°C ಹಾಗೂ ಕನಿಷ್ಠ 22°C ತಾಪಮಾನ ನಿರೀಕ್ಷಿಸಲಾಗಿದೆ.

ತೀರ್ಥಹಳ್ಳಿ: ತಾಲೂಕಿನಲ್ಲಿ ಮಳೆ ಮುಂದುವರಿಯಲಿದೆ. ಇಂದು ಗರಿಷ್ಠ ತಾಪಮಾನ 24°C ಹಾಗೂ ಕನಿಷ್ಠ 20°C ಇರಲಿದೆ.
ಹೊಸನಗರ: ತಾಲೂಕಿನಲ್ಲಿ ಮಳೆ ತೀವ್ರಗೊಳ್ಳಲಿದೆ. ಇವತ್ತು ಗರಿಷ್ಠ 24°C ಹಾಗೂ ಕನಿಷ್ಠ 21°C ತಾಪಮಾನ ಸಾಧ್ಯತೆ ಇದೆ.
ಸಾಗರ: ಭಾರಿ ಮಳೆ ಸುರಿಯಲಿದೆ. ಇವತ್ತು ಗರಿಷ್ಠ 23°C ಹಾಗೂ ಕನಿಷ್ಠ 21°C ತಾಪಮಾನ ದಾಖಲಾಗಲಿದೆ.
ಸೊರಬ: ತಾಲೂಕಿನಲ್ಲಿ ಮಳೆ ಮುಂದುವರಿಯಲಿದೆ. ಇಂದು ಗರಿಷ್ಠ 26°C ಹಾಗೂ ಕನಿಷ್ಠ 22°C ತಾಪಮಾನ ನಿರೀಕ್ಷಿಸಲಾಗಿದೆ.
ಶಿಕಾರಿಪುರ: ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆಗೆ ಮಳೆಯಾಗಲಿದೆ. ಇಂದು ಗರಿಷ್ಠ 26°C ಹಾಗೂ ಕನಿಷ್ಠ 22°C ತಾಪಮಾನ ಇರಲಿದೆ.