ಶಿವಮೊಗ್ಗ: ನಗರದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹ (39) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇದನ್ನೂ ಓದಿ:➤ ಪುರುಷರಲ್ಲಿ ಪ್ರಾಸ್ಟೇಟ್ ಹಿಗ್ಗುವಿಕೆ; ನಂಜಪ್ಪ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ
ನಗರದ ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿಯಾದ ನರಸಿಂಹನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮನೆಯೊಂದರ ಓಣಿ ಒಳಗೆ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ಗುರುತು ಸಿಗದಂತೆ ದಾಳಿ
ನರಸಿಂಹನ ಮೇಲೆ ಮನಸೋಯಿಚ್ಛೆ ದಾಳಿ ನಡೆಸಲಾಗಿದೆ. ಆತನ ತಲೆ ಹಾಗೂ ಕೈ ಭಾಗಕ್ಕೆ ದಾಳಿ ಮಾಡಲಾಗಿದೆ. ದಾಳಿಯ ಭೀಕರತೆಗೆ ನರಸಿಂಹನ ಕೈಗಳು ತುಂಡಾಗಿದ್ದು, ಮುಖ ಗುರುತು ಸಿಗದಂತಾಗಿದೆ. ಘಟನೆಯಲ್ಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರಿಯಪ್ಪ ಹಾಗೂ ಕೋಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:➤ ಬುರ್ಖಾ ಧರಿಸಿ ಮಹಿಳೆಯ ಮನೆಗೆ ನುಗ್ಗಿದ 3 ಪುರುಷರು, ಹಿಗ್ಗಾಮುಗ್ಗಾ ಥಳಿಸಿದ ಜನ, ದಾಖಲಾಯ್ತು 2 ಪ್ರಕರಣ