ಭದ್ರಾವತಿ: ಇಲ್ಲಿನ ಭದ್ರಾವತಿ – ತರೀಕೆರೆ ಮುಖ್ಯ ರಸ್ತೆಯ ಶಿವನಿ ಕ್ರಾಸ್ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ನಗರದ ಭೂತನಗುಡಿ ನಿವಾಸಿಗಳಾದ ಪನ್ನೀರ ಸೆಲ್ವಂ (70) ಹಾಗೂ ಕುಪ್ಪುರಾಣಿ (65) ಗಾಯಗೊಂಡವರು. ಸ್ಕೂಟರ್ನಲ್ಲಿ ಭದ್ರಾವತಿ ನಗರದಿಂದ ಶಿವನಿ ಕ್ರಾಸ್ ಕಡೆಗೆ ಇವರು ತೆರಳುತ್ತಿದ್ದರು. ಬಾರಂದೂರಿನಿಂದ ಭದ್ರಾವತಿ ಕಡೆಗೆ ಬರುತ್ತಿದ್ದ ಕಾರು ಶಿವನಿ ಕ್ರಾಸ್ನ ಪೆಟ್ರೋಲ್ ಬಂಕ್ ಬಳಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಚರಂಡಿಗೆ ಇಳಿದಿದೆ.

ಗಾಯಾಳುಗಳನ್ನು ತಕ್ಷಣವೇ ಭದ್ರಾವತಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭದ್ರಾವತಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

