ಭದ್ರಾವತಿಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಮನೆಗೆ ನುಗ್ಗಿ ಕತ್ತಿ ಬೀಸಿದ ಯುವಕ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಭದ್ರಾವತಿ: ಸಾರ್ವಜನಿಕವಾಗಿ ಮಹಿಳೆಯರು ಹಾಗೂ ಯುವತಿಯರ ಬಗ್ಗೆ ಅವಾಚ್ಯವಾಗಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬುದ್ಧಿವಾದ ಹೇಳಿದ್ದಕ್ಕೆ, ಆತ ಮನೆಗೆ ನುಗ್ಗಿ ಕತ್ತಿಯಿಂದ ಕೊಲೆಗೆ ಯತ್ನಿಸಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಆರೋಪಿಯು ರಸ್ತೆಯಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಹಾಗೂ ಯುವತಿಯರ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಗಳನ್ನು ಕೊಡು ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಈ ವರ್ತನೆಯನ್ನು ಗಮನಿಸಿದ ವ್ಯಕ್ತಿಯೊಬ್ಬರು ಅವರ ಪರಿಚಿತರ ಜೊತೆಗೆ ಸೇರಿ ಆರೋಪಿಗೆ ಇಂತಹ ಕೃತ್ಯಗಳನ್ನು ಮಾಡದಂತೆ ಬುದ್ಧಿವಾದ ಹೇಳಿದ್ದರು.

BHADRAVATHI-NEWS-GRAPHICS-BY-SHIVAMOGGA-LIVE.

ಮನೆಗೆ ನುಗ್ಗಿ ಕತ್ತಿಯಿಂದ ಅಟ್ಯಾಕ್‌

ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡಿದ್ದ ಯುವಕ, ವ್ಯಕ್ತಿಯು ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಏಕಾಏಕಿ ಕತ್ತಿಯೊಂದಿಗೆ ಮನೆಗೆ ನುಗ್ಗಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ನನ್ನ ವಿರುದ್ಧವೇ ಮಾತನಾಡುತ್ತೀಯಾ ಎಂದು ಕಿರುಚಾಡುತ್ತಾ ಕುತ್ತಿಗೆಗೆ ಕತ್ತಿಯಿಂದ ಬೀಸಿದ್ದಾನೆ. ಈ ವೇಳೆ ವ್ಯಕ್ತಿಯು ತಕ್ಷಣ ತಪ್ಪಿಸಿಕೊಂಡ ಕಾರಣ ಕತ್ತಿಯು ಎಡ ಹುಬ್ಬಿನ ಹತ್ತಿರ ತಾಗಿ ರಕ್ತಗಾಯವಾಗಿದೆ.

ಸ್ಥಳೀಯರು ಹಾಗೂ ಸ್ನೇಹಿತರು ಓಡಿ ಬಂದಾಗ ಆರೋಪಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.