ತುಂಗಾ ಡ್ಯಾಮ್‌ಗೆ ನೀರಿನ ಹರಿವು ಕುಸಿತ, ಲಿಂಗನಮಕ್ಕಿ ಒಳ ಹರಿವು ಶೂನ್ಯ, ಭದ್ರಾ ಡ್ಯಾಮ್‌ ಪರಿಸ್ಥಿತಿ ಹೇಗಿದೆ?

ಜಲಾಶಯದ ಸುದ್ದಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿ ಒಣ ಹವೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಕುಸಿದಿದೆ. ಜಿಲ್ಲೆಯ ಪ್ರಮುಖ ಡ್ಯಾಮ್‌ಗಳಾದ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳ ಜೂನ್ 19ರ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಯಾವ್ಯಾವ ಡ್ಯಾಮ್‌ ಪರಿಸ್ಥಿತಿ ಹೇಗಿದೆ?

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1747.10 ಅಡಿ (ಕಳೆದ ವರ್ಷ ಇದೇ ದಿನ: 1772 ಅಡಿ)
  • ಒಟ್ಟು ಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 15.94 ಟಿಎಂಸಿ
  • ಒಳಹರಿವು: ಶೂನ್ಯ
  • ಹೊರಹರಿವು: 4665 ಕ್ಯೂಸೆಕ್

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 136 ಅಡಿ 7 ಇಂಚು (ಕಳೆದ ವರ್ಷ ಇದೇ ದಿನ: 148 ಅಡಿ 3 ಇಂಚು)
  • ಒಟ್ಟು ಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 24.633 ಟಿಎಂಸಿ
  • ಒಳಹರಿವು: 361 ಕ್ಯೂಸೆಕ್
  • ಹೊರಹರಿವು: 211 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 587.44 ಮೀಟರ್ (ಕಳೆದ ವರ್ಷ ಇದೇ ದಿನ: 587.72 ಮೀಟರ್)
  • ಒಟ್ಟು ಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 2.799 ಟಿಎಂಸಿ
  • ಒಳಹರಿವು: 320 ಕ್ಯೂಸೆಕ್
  • ಹೊರಹರಿವು: 123 ಕ್ಯೂಸೆಕ್
Linganamakki-Dam-in-Sharavathi-River
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಶಿವಮೊಗ್ಗದಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ

Shivamogga Live Promotion